ADVERTISEMENT

ಬಿಹಾರ ವಿಧಾನಸಭಾ ಚುನಾವಣೆ: ಪರಿಶೀಲನಾ ಕಾರ್ಯ ಚುರುಕಿಗೆ ಸೂಚನೆ

ವಿಧಾನಸಭಾ ಚುನಾವಣೆಗೆ ದಿನಗಣನೆ

ಪಿಟಿಐ
Published 24 ಅಕ್ಟೋಬರ್ 2020, 7:32 IST
Last Updated 24 ಅಕ್ಟೋಬರ್ 2020, 7:32 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಪಟ್ನಾ: ಬಿಹಾರದಲ್ಲಿ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭಗೊಂಡಿದ್ದು, ಅಕ್ರಮ ಹಣ ಮತ್ತು ನಿಷೇಧಿತ ವಸ್ತುಗಳ ಶೋಧನಾ ಕಾರ್ಯವನ್ನು ಚುರುಕುಗೊಳಿಸಬೇಕು ಎಂದು ಚುನಾವಣಾ ಆಯೋಗ ಅಧಿಕಾರಿಗಳಿಗೆ ಸೂಚಿಸಿದೆ.

ಮೂರು ಹಂತದಲ್ಲಿ ನಡೆಯಲಿರುವ ಬಿಹಾರ ಚುನಾವಣೆ ಅ.28ರಿಂದ ಆರಂಭವಾಗಲಿದೆ. ಮೊದಲ ಹಂತದಲ್ಲಿ 78 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಆ ಕ್ಷೇತ್ರಗಳಿಗೆ ನಿಯೋಜನೆಗೊಂಡಿರುವ ವೀಕ್ಷಕರೊಂದಿಗೆ ನಡೆದ ಸಭೆಯಲ್ಲಿ ಮತದಾನ ಸಮಿತಿ ಈ ಮೇಲಿನ ನಿರ್ದೇಶನಗಳನ್ನು ನೀಡಿದೆ ಎಂದು ಹೆಚ್ಚುವರಿ ಮುಖ್ಯ ಚುನಾವಣಾ ಅಧಿಕಾರಿ (ಎಸಿಇಒ) ಸಂಜಯ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಸುನೀಲ್ ಅರೋರಾ ಮತ್ತು ಮತ್ತಿಬ್ಬರು ಚುನಾವಣಾ ಆಯುಕ್ತರಾದ ಸುಶೀಲ್ ಚಂದ್ರ ಮತ್ತು ರಾಜೀವ್ ಕುಮಾರ್ ಅವರು ಆನ್‌ಲೈನ್‌ ಸಭೆ ನಡೆಸಿದರು.

ADVERTISEMENT

ವೃದ್ಧರಿಗೆ ಮತದಾನದ ತರಬೇತಿ ನೀಡುವುದು ಅಥವಾ ಸೌಲಭ್ಯಗಳನ್ನು ಕಲ್ಪಿಸುವುದು ಸೇರಿದಂತೆ ಒಟ್ಟಾರೆ ಮತದಾನ ಪ್ರಕ್ರಿಯೆಗೆ ಕೈಗೊಂಡ ಸಿದ್ಧತೆಗಳ ಕುರಿತು ಅವರು ಮಾಹಿತಿ ಪಡೆದರು.

2019 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ವಿವಿಧ ತನಿಖಾ ಸಂಸ್ಥೆಗಳು ಬಿಹಾರದಲ್ಲಿ ₹35.27 ಕೋಟಿ ಮೌಲ್ಯದ ನಗದು ಮತ್ತು ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.