ಡೆಹ್ರಾಡೂನ್: ಸಂಭಾವ್ಯ ಪ್ರಕೃತಿ ವಿಕೋಪಗಳಿಂದಾಗುವ ಹಾನಿ ತಡೆಯಲು, ಉತ್ತರಾಖಂಡದ ಚಮೋಲಿ ಜಿಲ್ಲೆಯ ರೈನಿ ಗ್ರಾಮದ ನಿವಾಸಿಗಳನ್ನು ಕೂಡಲೇ ಸ್ಥಳಾಂತರಿಸಬೇಕು ಎಂದು ತಜ್ಞರು ಶಿಫಾರಸು ಮಾಡಿದ್ದಾರೆ.
ಕಳೆದ ಫೆಬ್ರುವರಿಯಲ್ಲಿ ಸಂಭವಿಸಿದ್ದ ಭಾರಿ ಮಳೆ, ಭೂಕುಸಿತದ ಪರಿಣಾಮ ಗ್ರಾಮಸ್ಥರು ಭಾರಿ ಸಂಕಷ್ಟ ಎದುರಿಸಿದ್ದರು. ಗ್ರಾಮದ ಬಳಿಯ ರಿಷಿ ಗಂಗಾ ನದಿಯಲ್ಲಿ ನಿರ್ಮಿಸಲಾಗಿದ್ದ ಜಲವಿದ್ಯುತ್ ಉತ್ಪಾದನೆ ಸ್ಥಾವರ ಸಂಪೂರ್ಣ ಕೊಚ್ಚಿಕೊಂಡು ಹೋಗಿತ್ತು. ಇದು ಸೇರಿದಂತೆ ಆಗಾಗ ಸಂಭವಿಸಿದ ನೈಸರ್ಗಿಕ ವಿಕೋಪಗಳು ಗ್ರಾಮಸ್ಥರ ನೆಮ್ಮದಿಯನ್ನೇ ಕಸಿದಿವೆ.
ರಿಷಿ ಗಂಗಾ ಮತ್ತು ಧವಳಿಗಂಗಾ ನದಿಗಳ ಸಂಗಮದಲ್ಲಿ ಈ ಗ್ರಾಮವಿದ್ದು, ಇಳಿಜಾರು ಪ್ರದೇಶಗಳೇ ಹೆಚ್ಚಿವೆ. ಹೀಗಾಗಿ ಅವಘಡಗಳು ಸಂಭವಿಸಿದಂತೆ ಕ್ರಮ ಕೈಗೊಳ್ಳಬೇಕು ಇಲ್ಲವೇ ಇಡೀ ಗ್ರಾಮವನ್ನೇ ಸ್ಥಳಾಂತರಿಸಬೇಕು ಎಂದು ಉತ್ತರಾಖಂಡ ವಿಪತ್ತು ಪುನಶ್ಚೇತನ ಕಾರ್ಯಕ್ರಮದಡಿ (ಯುಡಿಆರ್‌ಐ) ಸಲ್ಲಿಸಲಾಗಿರುವ ವರದಿಯಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.