ADVERTISEMENT

ಲಖನೌ ಕೋರ್ಟ್‌ ಆವರಣದಲ್ಲಿ 3 ಬಾಂಬ್ ಸ್ಫೋಟ, ವಕೀಲರಿಗೆ ಗಾಯ

ಪಿಟಿಐ
Published 13 ಫೆಬ್ರುವರಿ 2020, 8:19 IST
Last Updated 13 ಫೆಬ್ರುವರಿ 2020, 8:19 IST
ಬಾಂಬ್ ಸ್ಫೋಟದ ನಂತರ ಮಾತನಾಡಿದ ಲಖನೌ ವಕೀಲ ಸಂಜೀವ್ ಲೋಧಿ
ಬಾಂಬ್ ಸ್ಫೋಟದ ನಂತರ ಮಾತನಾಡಿದ ಲಖನೌ ವಕೀಲ ಸಂಜೀವ್ ಲೋಧಿ   

ಲಖನೌ: ನ್ಯಾಯಾಲಯ ಆವರಣದಲ್ಲಿ ಕಚ್ಚಾಬಾಂಬ್ ಸ್ಫೋಟಗೊಂಡ ಕಾರಣ ಇಬ್ಬರು ವಕೀಲರು ಗಾಯಗೊಂಡಿದ್ದಾರೆ. ಲಖನೌ ವಕೀಲರ ಸಂಘದ ಹಿರಿಯ ಸದಸ್ಯರೊಬ್ಬರನ್ನು ಗುರಿಯಾಗಿಸಿ ಬಾಂಬ್ ಎಸೆಯಲಾಯಿತು ಎಂದು ಮೂಲಗಳು ಹೇಳಿವೆ.

ಸ್ಫೋಟ ಸಂಭವಿಸಿದ ಸ್ಥಳವು ಲಖನೌದ ಹಝರತ್‌ಗಂಜ್‌ನ ಜಿಲ್ಲಾಧಿಕಾರಿ ಕಚೇರಿ ಸಮೀಪವಿದೆ. ಇಲ್ಲಿಂದ ಉತ್ತರ ಪ್ರದೇಶ ವಿಧಾನಸಭೆ ಕೇವಲ 2 ಕಿ.ಮೀ. ದೂರವಿದೆ. ಸ್ಫೋಟದ ನಂತರ ಸ್ಥಳದಲ್ಲಿ ಮೂರು ಕಚ್ಚಾ ಬಾಂಬ್‌ಗಳನ್ನು ಪೊಲೀಸರು ವಶಪಡಿಸಿಕೊಂಡರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ನನ್ನನ್ನೇ ಗುರಿಯಾಗಿಸಿ ಬಾಂಬ್ ಎಸೆಯಲಾಯಿತು. ಘಟನೆಯ ಹಿಂದೆ ಮತ್ತೋರ್ವ ವಕೀಲ ಜಿತು ಯಾದವ್ ಕೈವಾಡವಿದೆ ಎಂದುಲಖನೌ ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಸಂಜೀವ್ ಲೋಧಿ ಆರೋಪಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.