ADVERTISEMENT

ಲಖನೌ: ಭಾರಿ ಸ್ಫೋಟಕ, ಐಎಸ್‌ ಬಾವುಟ ವಶ

ಪಿಟಿಐ
Published 23 ಆಗಸ್ಟ್ 2020, 19:56 IST
Last Updated 23 ಆಗಸ್ಟ್ 2020, 19:56 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ/ಲಖನೌ:ಉತ್ತರಪ್ರದೇಶದ ಬಲರಾಮ್‌ಪುರದ ಮುಸ್ತಕೀಮ್‌ ಖಾನ್‌ ನಿವಾಸದಲ್ಲಿ ಭಾರಿ ಸ್ಫೋಟಕ ಮತ್ತುಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರ ಸಂಘಟನೆಯ ಬಾವುಟವನ್ನು ದೆಹಲಿ ಪೊಲೀಸರು ಪತ್ತೆ ಮಾಡಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಎರಡು ಪ್ರೆಷರ್‌ ಕುಕ್ಕರ್‌ಗಳಲ್ಲಿ ಅಳವಡಿಸಿದ್ದ ಸುಧಾರಿತ ಸ್ಫೋಟಕ (ಐಇಡಿ) ಮತ್ತು ಶಸ್ತ್ರಾಸ್ತ್ರ ಸಮೇತ ಆರೋಪಿ ಖಾನ್‌ನನ್ನು ಶುಕ್ರವಾರ ರಾತ್ರಿ ಪೊಲೀಸರು ಬಂಧಿಸಿದ್ದರು. ಈ ವೇಳೆ ಗುಂಡಿನ ಚಕಮಕಿ ನಡೆದಿತ್ತು.

ದೆಹಲಿ ಪೊಲೀಸ್‌ ವಿಶೇಷ ಘಟಕವು ಆರೋಪಿಯನ್ನು ಆತನ ಸ್ವಗ್ರಾಮ ಬಡಿಯಾ ಬೈಶಾಹಿಗೆ ಕರೆದೊಯ್ದು ತಪಾಸಣೆ ನಡೆಸಿತು. ಈ ವೇಳೆ ಏಳು ಭಾರಿ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಯಿತು ಎಂದು ಡಿಸಿಪಿ ಪಿ.ಎಸ್‌.ಕುಶ್ವಾಹ ತಿಳಿಸಿದ್ದಾರೆ.

ADVERTISEMENT

ಸ್ಫೋಟಕಗಳಿಗೆ ಬಳಸಿದ್ದ 30 ಬಾಲ್‌ ಬೇರಿಂಗ್‌ಗಳನ್ನು‌ ಸಮೀಪದ ಸೈಕಲ್‌ ಅಂಗಡಿಯಲ್ಲಿ ಖರೀದಿಸಲಾಗಿತ್ತು. ಸ್ಫೋಟಕಗಳ ಪರೀಕ್ಷೆಯನ್ನು ಸಮೀಪದ ಸ್ಮಶಾನದಲ್ಲಿ ಆರೋಪಿ ನಡೆಸಿದ್ದನು. ಗ್ರಾಮದ ವಿವಿಧೆಡೆ ತಪಾಸಣೆ ನಡೆಸಲಾಗಿದ್ದು, ಹಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಆರೋಪಿಯು ಇದೇ 15ರಂದು ದೆಹಲಿಯಲ್ಲಿ ಸ್ಫೋಟ ನಡೆಸಲು ಯೋಜಿಸಿದ್ದ. ಹೆಚ್ಚಿನ ಭದ್ರತೆಯ ಕಾರಣದಿಂದ ಸಂಚನ್ನು ಮುಂದೂಡಿದ್ದ ಎಂದು ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.