ADVERTISEMENT

2021ರ ವೇಳೆಗೆ 50 ಲಕ್ಷ ಮಂದಿ ಡಿಜಿಟಲ್‌ ಕೌಶಲ ತರಬೇತಿ

ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಿಂದ ಕ್ರಮ

ಪಿಟಿಐ
Published 24 ನವೆಂಬರ್ 2018, 17:16 IST
Last Updated 24 ನವೆಂಬರ್ 2018, 17:16 IST
   

ನವದೆಹಲಿ: ವಹಿವಾಟು ವಿಸ್ತರಣೆ ಹಾಗೂ ಜಾಗತಿಕ ಮಾರುಕಟ್ಟೆಗೆ ಪ್ರವೇಶಕ್ಕೆ ಅನುಕೂಲ ಮಾಡಿಕೊಡಲು2021ರ ವೇಳೆಗೆ 50 ಲಕ್ಷ ಮಂದಿಗೆ ಡಿಜಿಟಲ್‌ ಕೌಶಲದ ತರಬೇತಿ ನೀಡಲಾಗುವುದು ಎಂದು ಫೇಸ್‌ಬುಕ್‌ ಸಂಸ್ಥೆ ತಿಳಿಸಿದೆ.

‘ಸಣ್ಣ ವಹಿವಾಟುದಾರರು ಕೂಡ ಜಾಗತಿಕ ಆರ್ಥಿಕ ವಹಿವಾಟಿನ ಲಾಭ ಪಡೆಯಬೇಕು ಕೆಲವು ಸಹಭಾಗಿತ್ವದೊಂದಿಗೆ ಇಂತಹ ಜನರನ್ನು ಸಂಸ್ಥೆಯ ಮೂಲಕ ತಲುಪುತ್ತಿದ್ದೇವೆ. 2021ರ ವೇಳೆಗೆ 50 ಲಕ್ಷ ಮಂದಿಗೆ ಡಿಜಿಟಲ್‌ ಕೌಶಲ ಕಲಿಸಿಕೊಡಲಿದ್ದೇವೆ’ ಎಂದು ಸಂಸ್ಥೆಯ ಸಾರ್ವಜನಿಕ ನೀತಿಯ ಭಾರತ, ದಕ್ಷಿಣ ಏಷ್ಯಾ ವಿಭಾಗದ ನಿರ್ದೇಶಕಿ ಅಂಖಿದಾಸ್‌ ತಿಳಿಸಿದ್ದಾರೆ.

‘50 ಸಂಸ್ಥೆಯ ಸಹಭಾಗಿತ್ವದೊಂದಿಗೆ ಭಾರತದ 150 ನಗರಗಳು ಹಾಗೂ 40 ಸಾವಿರ ಗ್ರಾಮಗಳಲ್ಲಿ 10 ಲಕ್ಷ ಮಂದಿಗೆ ತರಬೇತಿ ನೀಡಲಾಗಿದೆ. ಫೇಸ್‌ಬುಕ್‌ನ ಬಳಕೆ, ಛಾಯಾಚಿತ್ರಗಳ ಶೇರಿಂಗ್‌ ಮೂಲಕ ಉದ್ಯಮ ಸೃಷ್ಟಿಗೂ ಸಹಕಾರಿಯಾಗಿರುತ್ತದೆ. ಸ್ಥಳೀಯ ವಹಿವಾಟುದಾರರನ್ನು ಇನ್ನಷ್ಟು ಬೆಳೆಸಲು ಸಹಕಾರಿಯಾಗಿರುತ್ತದೆ’ ಎಂದು ಅವರು ತಿಳಿಸಿದರು.

ADVERTISEMENT

‘ಫೇಸ್‌ಬುಕ್‌ ಸಂಸ್ಥೆ ಭಾರತದಲ್ಲಿ ಅತೀದೊಡ್ಡ ಮಾರುಕಟ್ಟೆ ಹೊಂದಿದೆ.ಈ ಕಾರ್ಯಕ್ರಮಕ್ಕೆ ಕರ್ನಾಟಕ, ಪಂಜಾಬ್‌, ಉತ್ತರಪ್ರದೇಶ ಸೇರಿದಂತೆ 29 ರಾಜ್ಯಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 14 ಪ್ರಾದೇಶಿಕ ಭಾಷೆಗಳಲ್ಲಿ ಈ ಸೇವೆ ಲಭ್ಯವಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.