ADVERTISEMENT

ಫ್ಯಾಕ್ಟ್ ಚೆಕ್: ಕೇರಳ ಹಿಂದೂ ದೇವಾಲಯವನ್ನು ಮುಸ್ಲಿಂರು ವಶಕ್ಕೆ ಪಡೆದರಾ?

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2022, 19:23 IST
Last Updated 21 ಏಪ್ರಿಲ್ 2022, 19:23 IST
   

‘ಕೇರಳದಲ್ಲಿನ ಪುರಾತನ ಹಿಂದೂ ದೇವಾಲಯವನ್ನು ಮುಸ್ಲಿಮರು ವಶಕ್ಕೆ ಪಡೆದಿದ್ದಾರೆ. ಹಿಂದೂಗಳು ಇದನ್ನು ವಿರೋಧಿಸಿದರೂ, ಅಲ್ಲಿನ ಕಮ್ಯುನಿಸ್ಟ್‌ ಸರ್ಕಾರವು ಕಣ್ಮುಚ್ಚಿ ಕುಳಿತಿದೆ’ ಎಂಬ ವಿವರ ಇರುವ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರ ಜತೆಯಲ್ಲಿ ಮಸೀದಿಯೊಂದರ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ.

‘ಇದು ಸುಳ್ಳು ಸುದ್ದಿ. ಇದು ಕೇರಳದಲ್ಲಿನ ಪುರಾತನ ದೇವಾಲಯವಲ್ಲ. ಬದಲಿಗೆ ಮಂಗಳೂರಿನ ಬಂದರ್‌ನಲ್ಲಿರುವ ಝೀನತ್ ಬಕ್ಷ್ ಮಸೀದಿ. ಇದು 1,400 ವರ್ಷಗಳಷ್ಟು ಪುರಾತನವಾದುದು ಮತ್ತು ಕರ್ನಾಟಕದಲ್ಲೇ ಅತ್ಯಂತ ಹಳೆಯದ್ದು. ಟಿಪ್ಪು ಸುಲ್ತಾನ್ ಇದನ್ನು ನವೀಕರಣ ಮಾಡಿದ್ದ. ಈ ಮಸೀದಿಯ ಬಗ್ಗೆ ಥೌಸಂಡ್ಸ್‌ ಷೇಡ್ಸ್‌ ಆಫ್‌ ಇಂಡಿಯಾ ಎಂಬ ಇನ್‌ಸ್ಟಾಗ್ರಾಂ ಪುಟವು ಸಾಕ್ಷ್ಯಚಿತ್ರ ಪ್ರಸಾರ ಮಾಡಿತ್ತು. ಅದನ್ನೇ ಬಳಸಿಕೊಂಡು, ಮುಸ್ಲಿಮರು ಪುರಾತನ ಮಂದಿರವನ್ನು ವಶಕ್ಕೆ ಪಡೆದಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ’ ಎಂದು ಆಲ್ಟ್‌ ನ್ಯೂಸ್‌ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT