ADVERTISEMENT

ರೂರ್ಕಿ: ನಕಲಿ ಸೇನಾ ಸಿಬ್ಬಂದಿ ಬಂಧನ

ಪಿಟಿಐ
Published 10 ಅಕ್ಟೋಬರ್ 2025, 15:16 IST
Last Updated 10 ಅಕ್ಟೋಬರ್ 2025, 15:16 IST
<div class="paragraphs"><p>ಬಂಧನ </p></div>

ಬಂಧನ

   

ಹರಿದ್ವಾರ: ಉತ್ತರಾಖಂಡದ ರೂರ್ಕಿ ಮಿಲಿಟರಿ ಕಂಟೋನ್ಮೆಂಟ್‌ನಲ್ಲಿ ಸೇನಾ ಸಮವಸ್ತ್ರದಲ್ಲಿ ಸುತ್ತಾಡುತ್ತಿದ್ದ ನಕಲಿ ಸಿಬ್ಬಂದಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ರಾಜಸ್ಥಾನದ ಝುಂಝುನೂ ಜಿಲ್ಲೆಯ ನವಲಗಢ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲ್ಸಿಯಾ ಗ್ರಾಮದ ಸುರೇಂದ್ರ ಕುಮಾರ್ ಬಂಧಿತ.

ADVERTISEMENT

ಸೇನಾ ಸಮವಸ್ತ್ರ, 18 ಡೆಬಿಟ್‌ ಕಾರ್ಡ್‌ಗಳು, ನಾಮಫಲಕ, ಸೇನೆಯ ನಕಲಿ ಗುರುತಿನ ಚೀಟಿ, ನಕಲಿ ನೇಮಕಾತಿ ಪತ್ರವನ್ನು ಬಂಧಿತನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಿಲಿಟರಿ ಸಂಕೀರ್ಣಕ್ಕೆ ಆತ ಭೇಟಿ ನೀಡಿದ ಉದ್ದೇಶದ ಕುರಿತು ಪೊಲೀಸರು ಮತ್ತು ಗುಪ್ತಚರ ಸಂಸ್ಥೆಗಳು ತನಿಖೆ ನಡೆಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.