ADVERTISEMENT

ನಕಲಿ ಮರಣ ಪತ್ರ ಪ್ರಕರಣ: ಮೂವರು ಅಧಿಕಾರಿಗಳು ಅಮಾನತು; ಎಫ್‌ಐಆರ್‌ ದಾಖಲು

ಪಿಟಿಐ
Published 30 ಆಗಸ್ಟ್ 2021, 11:00 IST
Last Updated 30 ಆಗಸ್ಟ್ 2021, 11:00 IST
ಕಮಲ್‌ ಪಟೇಲ್‌ –ಟ್ವಿಟರ್‌ ಚಿತ್ರ
ಕಮಲ್‌ ಪಟೇಲ್‌ –ಟ್ವಿಟರ್‌ ಚಿತ್ರ   

ಚಿಂದಿವಾರಾ(ಮಧ್ಯಪ್ರದೇಶ): ನಕಲಿ ಮರಣ ಪತ್ರವನ್ನು ಬಳಸಿ ಕಟ್ಟಡ ಕಾರ್ಮಿಕರಿಗಾಗಿ ಉದ್ದೇಶಿಸಲಾದ ಯೋಜನೆಯಿಂದ ಅಕ್ರಮವಾಗಿ ಹಣ ಸಂಗ್ರಹಿಸಿದ ಆರೋಪದಡಿ ಮಧ್ಯಪ್ರದೇಶ ಸರ್ಕಾರವು ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಜತೆಗೆ, ಮೂವರ ವಿರುದ್ಧ ಎಫ್‌ಐಆರ್‌ ದಾಖಲಿಸಿದೆ.

ಈ ಸಂಬಂಧ ಜನಪದ್ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಭಾನುವಾರ ಆದೇಶ ಹೊರಡಿಸಿದ್ದಾರೆ. ಬೋನಖೇಡಿ ಪಂಚಾಯತ್‌ ಕಾರ್ಯದರ್ಶಿ ರಾಕೇಶ್‌ ಚಾಂದೇಲ್‌,ಗ್ರಾಮ ರೋಜಗರ್‌ ಸಹಾಯಕ ಸಂಜಯ್‌ ಚೌರೆ, ಪಂಚಾಯತ್ ಸಮನ್ವಯ ಅಧಿಕಾರಿ ಸುನಿಲ್ ಅಂಧವಾನ್ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಲಾಗಿದೆ.

ಕಟ್ಟಡ ಕಾರ್ಮಿಕರ ಯೋಜನೆಯಡಿ ಚಿಂದಿವಾರಾ ಜಿಲ್ಲೆಯ ಬೋನಖೇಡಿ ಗ್ರಾಮದ 23 ಗ್ರಾಮಸ್ಥರ ನಕಲಿ ಮರಣ ಪತ್ರವನ್ನು ಬಳಸಿ ಹಣ ಪಡೆದಿರುವ ಆರೋಪಡಿ ಜನಪದ್‌ ಸಿಇಒ ಅವರು ಎಫ್‌ಐಆರ್‌ ದಾಖಲಿಸಿದ್ದಾರೆ.

ADVERTISEMENT

‘ಮಧ್ಯಪ್ರದೇಶ ಸರ್ಕಾರವು ಈ ಬಗ್ಗೆ ತನಿಖೆ ನಡೆಸುವಂತೆ ಶನಿವಾರ ಆದೇಶ ಹೊರಡಿಸಿತ್ತು’ ಎಂದು ಕೃಷಿ ಸಚಿವ ಕಮಲ್‌ ಪಟೇಲ್‌ ಅವರು ಮಾಹಿತಿ ನೀಡಿದರು.

ಈ ಯೋಜನೆಯಡಿ 23 ಮಂದಿಯ ನಕಲಿ ಮರಣ ಪತ್ರವನ್ನು ಬಳಸಿ ತಲಾ ₹2 ಲಕ್ಷ ಪಡೆಯಲಾಗಿದೆ ಎಂದು ವರದಿಯೊಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.