ADVERTISEMENT

ನಕಲಿ ವೆಬ್‌ಸೈಟ್‌ ಮೂಲಕ ‘ಪುರಿ’ ಪ್ರವಾಸಿಗರಿಗೆ ವಂಚನೆ: ಇಬ್ಬರ ಬಂಧನ

ಪಿಟಿಐ
Published 21 ಜುಲೈ 2025, 7:39 IST
Last Updated 21 ಜುಲೈ 2025, 7:39 IST
   

ಭುವನೇಶ್ವರ: ಪುರಿಗೆ ಆಗಮಿಸುವ ಪ್ರವಾಸಿಗರಿಗೆ ಹೋಟೆಲ್‌ ಬುಕ್ಕಿಂಗ್‌ ನಕಲಿ ವೆಬ್‌ಸೈಟ್‌ ಮೂಲಕ ವಂಚಿಸುತ್ತಿದ್ದ ರಾಜಸ್ಥಾನ ಮೂಲದ ಇಬ್ಬರನ್ನು ಒಡಿಸ್ಸಾದ ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳನ್ನು ಅಮಿರ್ ಖಾನ್‌(24), ಯೂಸುಫ್(27) ಎಂದು ಗುರುತಿಸಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಶುಮಾನ್ ಶರ್ಮಾ ಎಂಬುವವರನ್ನು ಆಗ್ರಾದಲ್ಲಿ ಬಂಧಿಸಲಾಗಿತ್ತು.

ಪುರಿ ಜಗನ್ನಾಥ ದೇಗುಲದ ಮುಖ್ಯಸ್ಥರು ಈ ಕುರಿತು ಪ್ರಕರಣ ದಾಖಲಿಸಿದ್ದರು.

ADVERTISEMENT

ಪುರಿಯ ಹೋಟೆಲ್‌ನಲ್ಲಿ ವಸತಿ ನೀಡುವ ನೆಪದಲ್ಲಿ ನಕಲಿ ವೆಬ್‌ಸೈಟ್‌ ಸೃಷ್ಠಿಸಿ, ಅದರಲ್ಲಿ ಮೊಬೈಲ್‌ ನಂಬರ್‌ ನೀಡುವ ಮೂಲಕ ಜನರನ್ನು ಮೋಸಗೊಳಿಸಿದ್ದಾರೆ. ನಕಲಿ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಈ ಕುರಿತು ಹೋಟೆಲ್‌ನ ಆಡಳಿತಕ್ಕೂ ಯಾವುದೇ ಅನುಮಾನ ಬಂದಿರಲಿಲ್ಲ. ವಂಚನೆಗೊಳಗಾದ ಪ್ರವಾಸಿಗರು ಹೋಟೆಲ್‌ನಲ್ಲಿ ದೂರು ನೀಡಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪರಿಚಿತ ಸ್ಥಳದಲ್ಲಿ ಹೋಟೆಲ್‌ ಬುಕ್ಕಿಂಗ್‌ ಮಾಡುವ ಮುನ್ನ ನಕಲಿ ವೆಬ್‌ಸೈಟ್‌ಗಳ ಕುರಿತು ಜಾಗರೂಕತೆಯಿಂದ ಇರುವಂತೆ ಪ್ರವಾಸಿಗರಿಗೆ ಪೊಲೀಸರು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.