ADVERTISEMENT

ಬೆಲೆ ಕುಸಿತ: ಅಂಚೆ ಮೂಲಕ ಪ್ರಧಾನಿಗೆ ಈರುಳ್ಳಿ ಕಳುಹಿಸಿದ ಮಹಾರಾಷ್ಟ್ರದ ರೈತರು

ಪಿಟಿಐ
Published 6 ಮಾರ್ಚ್ 2023, 14:22 IST
Last Updated 6 ಮಾರ್ಚ್ 2023, 14:22 IST
ಈರುಳ್ಳಿ 
ಈರುಳ್ಳಿ    

ಪುಣೆ: ಈರುಳ್ಳಿ ಬೆಲೆ ಕುಸಿತದಿಂದ ಕಂಗಾಲಾಗಿರುವ ಮಹಾರಾಷ್ಟ್ರದ ಅಹಮದ್‌ನಗರದ ರೈತರ ಗುಂಪೊಂದು ಪ್ರತಿಭಟನೆ ಸೂಚಕವಾಗಿ ‍ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಂಚೆ ಮೂಲಕ ಸೋಮವಾರ ಈರುಳ್ಳಿಯನ್ನು ‘ಪಾರ್ಸೆಲ್‌’ ಕಳುಹಿಸಿದೆ.

‘ಬೆಲೆ ಇಳಿಕೆಯಿಂದ ಸಂಕಷ್ಟಕ್ಕೆ ಸಿಲುಕಿರುವ ತಮಗೆ ಅಗತ್ಯ ಪರಿಹಾರ ಒದಗಿಸಬೇಕು. ಈರುಳ್ಳಿ ಹಾಗೂ ಇತರೆ ಕೃಷಿ ಉತ್ಪನ್ನಗಳ ರಫ್ತಿನ ಮೇಲೆ ಹೇರಲಾಗಿರುವ ನಿಷೇಧವನ್ನು ತೆರವುಗೊಳಿಸಬೇಕು. ಪ್ರತಿ ಕ್ವಿಂಟಲ್‌ಗೆ ₹1 ಸಾವಿರ ಪರಿಹಾರ ಪ್ರಕಟಿಸಬೇಕು’ ಎಂದು ಶೇತ್ಕಾರಿ ಸಂಘಟನೆ ಹಾಗೂ ಶೇತ್ಕಾರಿ ವಿಕಾಸ್‌ ಮಂಡಳ ಒತ್ತಾಯಿಸಿವೆ.

‘ಕೇಂದ್ರ ಸರ್ಕಾರ ಕೂಡಲೇ ಈರುಳ್ಳಿ ಸೇರಿದಂತೆ ಇತರ ಕೃಷಿ ಉತ್ಪನ್ನಗಳ ಮೇಲಿನ ನಿರ್ಬಂಧ ತೆರವುಗೊಳಿಸಬೇಕು. ಇದು ರೈತರಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಪ್ರವೇಶಿಸಲು ಅನುಕೂಲ ಮಾಡಿಕೊಡುತ್ತದೆ. ಅಲ್ಲದೆ, ಕ್ವಿಂಟಲ್‌ಗೆ ತಲಾ ₹1,000 ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.

ADVERTISEMENT

ಕೃಷಿಗೆ ಬಳಸುವ ರಾಸಾಯನಿಕ ಗೊಬ್ಬರ, ರೋಗನಿರೋಧಕ ಔಷಧ, ಪೆಟ್ರೋಲ್ ಮತ್ತು ಡೀಸೆಲ್‌ಗೆ ಜಾಗತಿಕ ಮಾರುಕಟ್ಎ ಬೆಲೆ ತೆರಬೇಕಿದೆ. ಆದರೆ, ನಮ್ಮ ಉತ್ಪನ್ನಗಳನ್ನು ಮಾತ್ರ ಭಾರತೀಯ ಮಾರುಕಟ್ಟೆ ದರಕ್ಕೆ ಮಾರಬೇಕೆ? ಎಂದು ರೈತರೊಬ್ಬರು ಪ್ರಶ್ನಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.