ADVERTISEMENT

ಬಿಜೆಪಿಯಿಂದಾಗಿ ಒಕ್ಕೂಟ ವ್ಯವಸ್ಥೆ ನಾಶವಾಗುತ್ತಿದೆ: ಎಂ.ಕೆ. ಸ್ಟಾಲಿನ್

ಪಿಟಿಐ
Published 20 ಆಗಸ್ಟ್ 2021, 17:24 IST
Last Updated 20 ಆಗಸ್ಟ್ 2021, 17:24 IST
ಎಂ.ಕೆ. ಸ್ಟಾಲಿನ್: ಪಿಟಿಐ
ಎಂ.ಕೆ. ಸ್ಟಾಲಿನ್: ಪಿಟಿಐ   

ಚೆನ್ನೈ: ರಾಜ್ಯಗಳ ಹಕ್ಕುಗಳ ಬಗ್ಗೆ ಬಿಜೆಪಿಯ ಅಲ್ಪ ಗೌರವದಿಂದಾಗಿ ಒಕ್ಕೂಟ ವ್ಯವಸ್ಥೆ ನಾಶವಾಗುತ್ತಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ವಿರುದ್ಧ ವಿರೋಧ ಪಕ್ಷಗಳ ಏಕತೆಯನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕರೆದಿದ್ದ ವರ್ಚುವಲ್ ಸಭೆಯಲ್ಲಿ ಪಾಲ್ಗೊಂಡಿದ್ದ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ಧಾರೆ.

ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಜೊತೆಗೆ ಡಿಎಂಕೆಯ ಟಿ.ಆರ್. ಬಾಲು ಸೇರಿದಂತೆ 19 ಬಿಜೆಪಿಯೇತರ ರಾಜಕೀಯ ಪಕ್ಷಗಳ ಮುಖಂಡರು ಸೋನಿಯಾ ಗಾಂಧಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡರು.

ADVERTISEMENT

ಇದೇವೇಳೆ, ಬಿಜೆಪಿ ವಿರುದ್ಧ ಸೆಪ್ಟೆಂಬರ್ 20 ರಿಂದ 30ರವರೆಗೆ ದೇಶದಾದ್ಯಂತ ಪ್ರತಿಭಟನೆ ಮತ್ತು ಪ್ರದರ್ಶನಗಳನ್ನು ಆಯೋಜಿಸುವುದಾಗಿ ಜಂಟಿ ಹೇಳಿಕೆಯಲ್ಲಿ ಘೋಷಿಸಿದರು. ಉತ್ತಮ ನಾಳೆಗಾಗಿ ಭಾರತವನ್ನು ಉಳಿಸಿ ಎಂದು ಜನರನ್ನು ಒತ್ತಾಯಿಸಿದರು.

‘ರಾಜ್ಯಗಳ ಹಕ್ಕುಗಳ ಬಗ್ಗೆ ಬಿಜೆಪಿ ಹೊಂದಿರುವ ಅಲ್ಪ ಗೌರವದಿಂದಾಗಿ ಫೆಡರಲಿಸಂ ನಾಶವಾಗುತ್ತಿದೆ. ಈ ಸಮಯದಲ್ಲಿ ಪ್ರತಿಪಕ್ಷಗಳು ಒಗ್ಗಟ್ಟಾಗಿ ನಿಲ್ಲುವುದು ಅತ್ಯಗತ್ಯವಾಗಿದೆ. ಇತ್ತೀಚಿನ ಸಂಸತ್ ಅಧಿವೇಶನವು ನಮ್ಮ ಏಕತೆಗೆ ಸಾಕ್ಷಿಯಾಗಿದೆ. ಇದು ಬಲವಾಗಿ ಬೆಳೆಯಬೇಕು ಮತ್ತು ಡಿಎಂಕೆ ಒಟ್ಟಾಗಿ ಜಂಟಿ ಹೇಳಿಕೆಯನ್ನು ಬೆಂಬಲಿಸುತ್ತದೆ’ ಎಂದು ಸ್ಟಾಲಿನ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ವಿರೋಧ ಪಕ್ಷಗಳ ಸಭೆಯಲ್ಲಿ 2024ರ ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷವನ್ನು ಸೋಲಿಸಲು ಒಗ್ಗಟ್ಟಿನಿಂದ ಮುನ್ನಡೆಯಲು ಒತ್ತಿ ಹೇಳಲಾಗಿದೆ. ಇದೇವೇಳೆ, ವಿಪಕ್ಷಗಳ ನಾಯಕರು ಕೇಂದ್ರದ ಮುಂದೆ 11 ಅಂಶಗಳ ಚಾರ್ಟರ್ ಅನ್ನು ಸಹ ಮಂಡಿಸಿದ್ದಾರೆ. ಇದನ್ನು ಸಹ ಸ್ಟಾಲಿನ್ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.