ADVERTISEMENT

ಫೆಮಿನಾ ಮಿಸ್‌ ಇಂಡಿಯಾ 2019ಕ್ಕೆ ತೆರೆ: ರಾಜಸ್ಥಾನದ ಸುಮನ್‌ ರಾವ್‌ಗೆ ಕಿರೀಟ

ಏಜೆನ್ಸೀಸ್
Published 16 ಜೂನ್ 2019, 2:11 IST
Last Updated 16 ಜೂನ್ 2019, 2:11 IST
   

ಮುಂಬೈ: ಫೆಮಿನಾ ಮಿಸ್‌ ಇಂಡಿಯಾ ಸ್ಪರ್ಧೆ–2019ಗೆ ತೆರೆ ಬಿದ್ದಿದ್ದು, ರಾಜಸ್ಥಾನದ ಸುಮನ್‌ ರಾವ್‌ ಅವರು ಮಿಸ್‌ ಇಂಡಿಯಾ 2019 ಆಗಿ ಆಯ್ಕೆಯಾಗಿದ್ಧಾರೆ.

ಮುಂಬೈನ್‌ ಸರ್ದಾರ್‌ ಪಟೇಲ್‌ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಮಿಸ್‌ ಇಂಡಿಯಾ–2019ರ ಸ್ಪರ್ಧೆಯ ವಿಜೇತರನ್ನು ಶನಿವಾರ ರಾತ್ರಿ ಘೋಷಣೆ ಮಾಡಲಾಯಿತು. ರಾಜಸ್ಥಾನದ ಸುಮನ್‌ ರಾವ್‌ ಅವರನ್ನು ಈ ಬಾರಿಯ ಫೆಮಿನಾ ಸುಂದರಿ ಎಂದು ಪ್ರಕಟಿಸಲಾಯಿತು. 2018ರ ಮಿಸ್‌ ಇಂಡಿಯಾ, ತಮಿಳುನಾಡಿನ ಅನುಕೀರ್ತಿ ವಾಸ್‌ ಅವರು ಈ ಬಾರಿಯ ಮಿಸ್‌ ಇಂಡಿಯಾ ಸುಮನ್‌ ರಾವ್‌ಗೆ ಕಿರೀಟ ತೊಡಿಸಿದರು.

ಆಂಧ್ರ ಪ್ರದೇಶದ ಶ್ರೇಯಾ ರಾವ್‌ ಅವರು ರನ್ನರ್‌ ಅಪ್‌ ಆದರು. ತೆಲಂಗಾಣದ ಶಿವಾನಿ ಅವರು ತೃತೀಯ ಸ್ಥಾನ ಅಲಂಕರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.