ADVERTISEMENT

ಆರೋಗ್ಯ ಸಮಸ್ಯೆ: ಅಸ್ಟ್ರಾಜೆನೆಕಾ ಕೋವಿಡ್ ಲಸಿಕೆ ಬಳಕೆ ನಿಷೇಧಿಸಿದ ಫಿನ್‌ಲ್ಯಾಂಡ್

ಏಜೆನ್ಸೀಸ್
Published 20 ಮಾರ್ಚ್ 2021, 2:20 IST
Last Updated 20 ಮಾರ್ಚ್ 2021, 2:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೆಲ್ಸಿಂಕಿ: ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಹಾಗೂ ಅಸ್ಟ್ರಾಜೆನೆಕಾ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿರುವ ಕೋವಿಡ್-19 ಲಸಿಕೆ ಬಳಕೆಯನ್ನು ಫಿನ್‌ಲ್ಯಾಂಡ್‌ ನಿಷೇಧಿಸಿದೆ. ಈ ಲಸಿಕೆ ಹಾಕಿಸಿಕೊಂಡ ಇಬ್ಬರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಕಾಣಿಸಿಕೊಂಡ ಬಗ್ಗೆ ವರದಿಯಾಗಿದ್ದು, ಅದಾದ ಬಳಿಕ ಈ ತೀರ್ಮಾನ ಕೈಗೊಳ್ಳಲಾಗಿದೆ.

ʼಫಿನ್‌ಲ್ಯಾಂಡ್‌ ಮೆಡಿಸಿನ್‌ ಏಜೆನ್ಸಿ (ಎಫ್‌ಎಂಇಎ) ಮಾಹಿತಿ ಪ್ರಕಾರ ಅಸ್ಟ್ರಾಜೆನೆಕಾ ಲಸಿಕೆ ಹಾಕಿಸಿಕೊಂಡ 4-10 ದಿನಗಳ ಬಳಿಕ ಇಬ್ಬರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಕಾಣಿಸಿಕೊಂಡಿದೆʼ ಎಂದು ಫಿನ್‌ಲ್ಯಾಂಡ್‌ ಆರೋಗ್ಯ ಮತ್ತು ಕಲ್ಯಾಣ ಸಂಸ್ಥೆ (ಟಿಎಚ್‌ಎಲ್‌) ಪ್ರಕಟಿಸಿದೆ.

ಲಸಿಕೆ ಪಡೆದವರಲ್ಲಿರಕ್ತ ಹೆಪ್ಪುಗಟ್ಟುವುದು ಸೇರಿದಂತೆ, ಜ್ವರ, ಎದೆ ನೋವಿನಂತಹ ಸಮಸ್ಯೆಗಳು ಕಾಣಿಸಿಕೊಂಡ ಬಗ್ಗೆವರದಿಯಾದ ನಂತರ ಯುರೋಪ್‌ನ ಅತಿ ದೊಡ್ಡ ರಾಷ್ಟ್ರಗಳಾದಜರ್ಮನಿ,ಇಟಲಿ ಮತ್ತುಫ್ರಾನ್ಸ್‌ನಲ್ಲೂಈ ಲಸಿಕೆ ಬಳಕೆಯನ್ನು ಸ್ಥಗಿತಗೊಳಿಸಲಾಗಿದೆ.

ADVERTISEMENT

ಅದಾದ ಬಳಿಕ ಅಂಕಿ-ಅಂಶಗಳನ್ನು ಪರಿಶೀಲಿಸಿ ಪ್ರತಿಕ್ರಿಯೆ ನೀಡಿದ್ದ ಯುರೋಪಿಯನ್‌ ಮೆಡಿಸಿನ್‌ ಏಜೆನ್ಸಿಯು (ಇಎಂಎ), ʼತಜ್ಞರು ಸ್ಪಷ್ಟ ವೈಜ್ಞಾನಿಕ ತೀರ್ಮಾನಕ್ಕೆ ಬಂದಿದ್ದಾರೆ. ಇದು (ಲಸಿಕೆ) ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆʼ ಎಂದು ಶುಕ್ರವಾರವಷ್ಟೇ ಘೋಷಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.