ADVERTISEMENT

'ಹಿಂದೂಗಳು ಬಿಜೆಪಿಗೆ ಮತ ನೀಡಿ ಗೆಲ್ಲಿಸಿ' ಎಂದ ಬಿಜೆಪಿ ಸಚಿವ ವಿರುದ್ಧ ಎಫ್‍ಐಆರ್

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2018, 13:55 IST
Last Updated 30 ಅಕ್ಟೋಬರ್ 2018, 13:55 IST
   

ಬನಸ್ವರ್: ಎಲ್ಲ ಹಿಂದೂಗಳು ಒಗ್ಗಟ್ಟಾಗಿ ಬಿಜೆಪಿಗೆ ಮತ ನೀಡಬೇಕು ಎಂದು ಆಹ್ವಾನ ನೀಡಿದ್ದ ರಾಜಸ್ಥಾನದ ಬಿಜೆಪಿ ಸಚಿವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

ಕಳೆದ ದಿನ ನಡೆದ ಚುನಾವಣಾ ಪ್ರಚಾರ ರ್‍ಯಾಲಿಯಲ್ಲಿ ಗ್ರಾಮೀಣಭಿವೃದ್ಧಿ ಸಚಿವ ಧನ್ ಸಿಂಗ್ ರಾವತ್ ಆ ರೀತಿ ಆಹ್ವಾನ ನೀಡಿದ್ದರು.ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ರಿಟರ್ನಿಂಗ್ ಆಫೀಸರ್ರಾವತ್ ಅವರಿಗೆ ನೋಟಿಸ್ ನೀಡಿದ್ದರು.ಈ ನೋಟಿಸ್‍ಗೆ ಉತ್ತರ ಲಭಿಸದೇ ಇದ್ದ ಕಾರಣ ಸಚಿವರ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಹೇಳಿದ್ದಾರೆ.

ಧರ್ಮದ ಹೆಸರಿನಲ್ಲಿ ಮತ ಯಾಚನೆ ಮಾಡಿದ ಪ್ರಕರಣದಲ್ಲಿ ಕೇಸು ದಾಖಲಾಗಿದೆ.

ADVERTISEMENT

ಮುಸ್ಲಿಮರು ಒಂದಾಗಿ ಕಾಂಗ್ರೆಸ್‍ಗೆ ಮತ ನೀಡುವುದಾದರೆ ಹಿಂದೂಗಳು ಬಿಜೆಪಿಗೆ ಮತ ನೀಡುವ ಮೂಲಕ ಬಹುಮತದಿಂದ ಬಿಜೆಪಿ ಅಧಿಕಾರಕ್ಕೇರುವಂತೆ ಮಾಡಬೇಕು ಎಂದು ರಾವತ್ ಹೇಳಿದ್ದರು.

ಡಿಸೆಂಬರ್ 7ರಂದು ರಾಜಸ್ಥಾನದಲ್ಲಿ ಚುನಾವಣೆ ನಡೆಯಲಿದೆ.ಧರ್ಮದ ಹೆಸರಿನಲ್ಲಿ ನಡೆಯುವ ಚುನಾವಣಾ ಪ್ರಚಾರವನ್ನು ತಾವು ಬೆಂಬಲಿಸುವುದಿಲ್ಲ.ಎಲ್ಲರ ಅಭಿವೃದ್ಧಿಯೇ ನಮ್ಮ ಪಕ್ಷದ ಮೂಲಮಂತ್ರ ಎಂದು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.