ADVERTISEMENT

ಅಹಮದಾಬಾದ್‌: ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅನಾಹುತ; ಯಾವುದೇ ಹಾನಿ ಇಲ್ಲ

ಪಿಟಿಐ
Published 24 ಡಿಸೆಂಬರ್ 2024, 4:35 IST
Last Updated 24 ಡಿಸೆಂಬರ್ 2024, 4:35 IST
<div class="paragraphs"><p>ಬಹುಮಹಡಿ ಕಟ್ಟಡ (ಸಾಂಕೇತಿಕ ಚಿತ್ರ)</p></div>

ಬಹುಮಹಡಿ ಕಟ್ಟಡ (ಸಾಂಕೇತಿಕ ಚಿತ್ರ)

   

ಅಹಮದಾಬಾದ್: ಇಲ್ಲಿನ ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು ಯಾವುದೇ ಹಾನಿ ಸಂಭವಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ. 

ಅಹಮದಾಬಾದ್‌ನ ತಲ್ಟೇಜ್ ಪ್ರದೇಶದ ಟೈಟಾನಿಯಂ ಸ್ಕ್ವೇರ್ ಬಹುಮಹಡಿ ವಾಣಿಜ್ಯ ಕಟ್ಟಡದ ಸಿ-ಬ್ಲಾಕ್‌ನ ಒಂಬತ್ತನೇ ಮಹಡಿಯಲ್ಲಿ ಬೆಳಿಗ್ಗೆ 4.30ಕ್ಕೆ ಬೆಂಕಿ ಕಾಣಿಸಿಕೊಂಡ ಬಗ್ಗೆ ಭದ್ರತಾ ಸಿಬ್ಬಂದಿ ಕರೆ ಮಾಡಿದರು. ನಾವು ಸ್ಥಳಕ್ಕೆ ಬರುವ ವೇಳೆಗೆ ಬೆಂಕಿ ಎಂಟು ಮತ್ತು ಹತ್ತನೇ ಮಹಡಿಗಳಿಗೆ ವ್ಯಾಪಿಸಿತ್ತು. ತಕ್ಷಣ ನಮ್ಮ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ 20 ನಿಮಿಷಗಳಲ್ಲಿ ಬೆಂಕಿಯನ್ನು ನಂದಿಸಿದರು ಎಂದು ಅಗ್ನಿಶಾಮಕ ಅಧಿಕಾರಿ ಜಯೇಶ್ ಖಾಡಿಯಾ ಹೇಳಿದರು.

ADVERTISEMENT

ಘಟನೆ ಸಮಯದಲ್ಲಿ ಕಟ್ಟಡದಲ್ಲಿನ ಕಚೇರಿಗಳು ಖಾಲಿಯಾಗಿದ್ದವು. ಅಲ್ಲಿ ಯಾರೂ ಇರಲಿಲ್ಲವಾದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಶಾರ್ಟ್ ಸರ್ಕ್ಯೂಟ್ ಕಾರಣದಿಂದ ಬೆಂಕಿ ಅವಘಡ ಸಂಭವಿಸರಬಹುದು ಎಂದು ಅವರು ಶಂಕೆ ವ್ಯಕ್ತಪಡಿಸಿದರು. 

28 ಅಗ್ನಿಶಾಮಕ ವಾಹನಗಳು ಮತ್ತು ನೂರಾರು ಜನ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರದ ನಡುವೆ ಬೆಂಕಿ ನಂದಿಸಲಾಯಿತು ಎಂದು ಜಯೇಶ್ ಖಾಡಿಯಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.