ADVERTISEMENT

ನೂತನ ಸಚಿವ ಸಂಪುಟ-ಇಂದು ಮೊದಲ ಸಭೆ, ಖಾತೆ ಹಂಚಿಕೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 31 ಮೇ 2019, 4:47 IST
Last Updated 31 ಮೇ 2019, 4:47 IST
   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನೊಳಗೊಂಡ ನೂತನ ಸಚಿವ ಸಂಪುಟ ಪ್ರಥಮ ಸಭೆ ಶುಕ್ರವಾರ ನಡೆಯಲಿದೆ.

25 ಮಂದಿ ಸಂಪುಟ ದರ್ಜೆ ಸಚಿವರೂ ಸೇರಿದಂತೆ 57 ಮಂದಿ ಸಚಿವರು ಗುರುವಾರ ರಾತ್ರಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರೆಲ್ಲಾ ಸಚಿವರಾಗಿದ್ದಾರೆ. ಆದರೆ, ಯಾರಿಗೆ ಯಾವ ಖಾತೆ ಎಂಬ ಬಗ್ಗೆ ಇನ್ನೂ ಅಂತಿಮವಾಗಿ ನಿರ್ಧಾರವಾಗಿಲ್ಲ. ಶುಕ್ರವಾರ ನಡೆಯುವ ಸಭೆಯಲ್ಲಿ ಖಾತೆ ಹಂಚಿಕೆಯಾಗುವ ಸಂಭವ ಇದೆ.

19 ಮಂದಿ ಹೊಸಬರು ಪ್ರಧಾನಿ ಮೋದಿ ಅವರ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಅಲ್ಲದೆ, ಕಳೆದ ಸರ್ಕಾರದಲ್ಲಿ ಅಧಿಕಾರದಲ್ಲಿದ್ದ ಹಲವು ಪ್ರಮುಖರನ್ನು ಕೈಬಿಟ್ಟು ಹೊಸಬರನ್ನು ಸೇರಿಸಿಕೊಳ್ಳಲಾಗಿದೆ.

ADVERTISEMENT

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕೂಡ ಮೋದಿ ಅವರ ಸಚಿವ ಸಂಪುಟದಲ್ಲಿ ಸೇರಿಕೊಂಡಿರುವುದು ಹೊಸ ಬದಲಾವಣೆ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ.

ಸಚಿವ ಸ್ಥಾನ ಕೈ ತಪ್ಪಿದವರಲ್ಲಿ ಪ್ರಮುಖರು, ಸುಷ್ಮಾ ಸ್ವರಾಜ್, ಸುರೇಶ್ ಪ್ರಭು, ಕೃಷಿ ಸಚಿವ ರಾಧಾಮೋಹನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ, ಆರೋಗ್ಯ ಸಚಿವ ಜೆ.ಪಿ.ನಡ್ಡಾ, ಉಕ್ಕು ಸಚಿವ ಚೌದರಿ ಬೀರೆಂದರ್ ಸಿಂಗ್, ಬುಡಕಟ್ಟು ವ್ಯವಹಾರಗಳ ಸಚಿವ ಜೆ.ಓರಮ್, ಅನಂತಕುಮಾರ್ ಹೆಗಡೆ ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.