ADVERTISEMENT

ಶ್ರೀನಗರ ಸೇರಿ ಐದು ವಿಮಾನ ನಿಲ್ದಾಣಗಳಲ್ಲಿ ನಾಗರಿಕ ವಿಮಾನ ಸಂಚಾರಕ್ಕೆ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2019, 7:00 IST
Last Updated 27 ಫೆಬ್ರುವರಿ 2019, 7:00 IST
ಶ್ರೀನಗರ ವಿಮಾನ ನಿಲ್ದಾಣ (ಸಂಗ್ರಹ ಚಿತ್ರ)
ಶ್ರೀನಗರ ವಿಮಾನ ನಿಲ್ದಾಣ (ಸಂಗ್ರಹ ಚಿತ್ರ)   

ನವದೆಹಲಿ: ಕಾಶ್ಮೀರದ ಬುದ್‌ಗಾವ್ ಜಿಲ್ಲೆಯಲ್ಲಿ ವಾಯುಪಡೆಯ ಎಂಐ–17 ಹೆಲಿಕಾಪ್ಟರ್ಧರೆಗುರುಳಿದ ಹಿನ್ನೆಲೆಯಲ್ಲಿಶ್ರೀನಗರ, ಜಮ್ಮು,ಲೇಹ್, ಚಂಡಿಗಡ ಮತ್ತು ಅಮೃತಸರ ವಿಮಾನ ನಿಲ್ದಾಣಗಳಲ್ಲಿ ನಾಗರಿಕ ವಿಮಾನ ಸಂಚಾರವನ್ನು ಬುಧವಾರಕೇಂದ್ರ ಸರ್ಕಾರನಿರ್ಬಂಧಿಸಿದೆ.

ಪಾಕಿಸ್ತಾನದಲ್ಲಿದ್ದ ಉಗ್ರಗಾಮಿ ನೆಲೆಗಳ ಮೇಲೆ ಮಂಗಳವಾರ ಭಾರತೀಯ ವಾಯುಪಡೆಯ ವಿಮಾನಗಳ ಮಿಂಚಿನ ದಾಳಿ ನಡೆಸಿದ ನಂತರ ಎರಡೂ ದೇಶಗಳ ಸಂಬಂಧ ಹಳಸಿತ್ತು. ಬುಧವಾರ ಮುಂಜಾನೆಯಿಂದ ಪಾಕ್‌ ಸೇನಾಪಡೆಗಳು ಭಾರತೀಯ ಗಡಿ ಠಾಣೆಗಳ ಮೇಲೆ ದಾಳಿ ಆರಂಭಿಸಿದ್ದವು.

‘ತುರ್ತುಪರಿಸ್ಥಿತಿಯ ಕಾರಣ ವಿಮಾನ ಸಂಚಾರವನ್ನು ನಿರ್ಬಂಧಿಸಲಾಗಿದೆ’ ಎಂದು ಶ್ರೀನಗರದಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿ ಪಿಟಿಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ. ‘ತುರ್ತುಪರಿಸ್ಥಿತಿಯ ಸ್ವರೂಪ ಏನು’ ಎನ್ನುವ ಪ್ರಶ್ನೆಗೆ ಅಧಿಕಾರಿಗಳು ಸಮರ್ಪಕ ಉತ್ತರ ನೀಡಲಿಲ್ಲ. ಆದರೆ ಬುದ್‌ಗಾವ್ ದುರಂತದ ಹಿನ್ನೆಲೆಯಲ್ಲಿ ಅಧಿಕಾರಿಗಳುಈ ಕ್ರಮ ಘೋಷಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ADVERTISEMENT

ವಿಮಾನ ಸಂಚಾರ ನಿಯಂತ್ರಕರು ನಾಗರಿಕ ವಿಮಾನಗಳ ಸಂಚಾರ ನಿರ್ಬಂಧಿಸಲು ಸೂಚನೆ ನೀಡಿದ್ದರು. ಜಮ್ಮು, ಲೇಹ್ ಮತ್ತು ಶ್ರೀನಗರ ವಿಮಾನ ನಿಲ್ದಾಣಗಳಿಗೆ ಬರುತ್ತಿದ್ದ ವಿಮಾನಗಳನ್ನು ಅವುಗಳು ಹೊರಟ ನಿಲ್ದಾಣಗಳಿಗೆ ವಾಪಸ್ ಕಳಿಸಲಾಯಿತು ಎಂದು ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.