ADVERTISEMENT

ರಾಜಸ್ಥಾನ: ನವಜಾತ ಶಿಶು ಸೇರಿ ಐವರ ಮೃತದೇಹಗಳು ಬಾವಿಯಲ್ಲಿ ಪತ್ತೆ

ಪಿಟಿಐ
Published 28 ಮೇ 2022, 13:01 IST
Last Updated 28 ಮೇ 2022, 13:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜೈಪುರ (ಪಿಟಿಐ): ರಾಜಸ್ಥಾನದ ಜೈಪುರ ಜಿಲ್ಲೆಯ ದೂದು ಎಂಬ ಗ್ರಾಮದಲ್ಲಿ ನವಜಾತು ಶಿಶು ಸೇರಿದಂತೆ ಐವರು ಕುಟುಂಬ ಸದಸ್ಯರ ಮೃತದೇಹಗಳು ಶನಿವಾರ ಬಾವಿಯಲ್ಲಿ ಪತ್ತೆಯಾಗಿವೆ. ಇದೊಂದು ಆತ್ಮಹತ್ಯೆ ಪ್ರಕರಣ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಮೃತರನ್ನು ಸೋದರಿಯರಾದ ಕಾಳಿದೇವಿ(27), ಮಮತಾ ಮೀನಾ(23), ಕಮಲೇಶ್ ಮೀನಾ(20) ಮತ್ತು ಹರ್ಷಿತ್(4) ಹಾಗೂ 20 ದಿನದ ಮಗು ಎಂದು ಗುರುತಿಸಲಾಗಿದೆ. ಅವರಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ

ಇಲ್ಲಿನ ಮೀನೊ ಕಾ ಮೊಹಲ್ಲಾದಲ್ಲಿ ವಾಸಿಸುತ್ತಿದ್ದ ಈ ಸಂತ್ರಸ್ತ ಕುಟುಂಬವು, ಮೇ 25ರಂದು ಮಾರುಕಟ್ಟೆಗೆ ಹೋಗುತ್ತಿರುವುದಾಗಿ ಹೇಳಿ ಹೋಗಿತ್ತು. ಆದರೆ, ಅದಾದ ಬಳಿಕ ಅವರು ಮನೆಗೆ ವಾಪಸಾಗಿರಲಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.