ADVERTISEMENT

ಮಹಾರಾಷ್ಟ್ರದ ಮಾಜಿ ಸಚಿವ ವಿಲಾಸ್ ಪಾಟೀಲ್ ಉಂಡಲ್ಕರ್ ನಿಧನ

ಪಿಟಿಐ
Published 4 ಜನವರಿ 2021, 7:50 IST
Last Updated 4 ಜನವರಿ 2021, 7:50 IST

ಸತಾರಾ: ಮಹಾರಾಷ್ಟ್ರದಮಾಜಿ ಸಚಿವ, ಕಾಂಗ್ರೆಸ್‌ ಹಿರಿಯ ನಾಯಕ ವಿಲಾಸ್ ಪಾಟೀಲ್ ಉಂಡಲ್ಕರ್ (82) ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು. ಕೆಲಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ವಿಲಾಸ್ ಪಾಟೀಲ್ ಅವರು ‘ಕಾಕಾ’ ಎಂದೇ ಜನಪ್ರಿಯತೆ ಪಡೆದಿದ್ದರು. ಅವರು 2014ರ ತನಕ ಕರಾಡ್‌–ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 2014ರಲ್ಲಿ ಕಾಂಗ್ರೆಸ್ ಅವರಿಗೆ ಸ್ಪರ್ಧೆಗೆ ಅವಕಾಶ ನೀಡಿರಲಿಲ್ಲ.

ಕಾಂಗ್ರೆಸ್‌ ನೇತೃತ್ವದ ಸರ್ಕಾರ ಆಡಳಿತದಲ್ಲಿರುವಾಗ ವಿಲಾಸ್‌ ಅವರು ಕಾನೂನು, ನ್ಯಾಯ ಮತ್ತು ಸಹಕಾರಿ ಇಲಾಖೆಗಳ ಸಚಿವರಾಗಿದ್ದರು. ಅಂತ್ಯಕ್ರಿಯೆ ಸತಾರಾ ಜಿಲ್ಲೆಯ ಅವರ ಸ್ವಗ್ರಾಮ ಉಂಡಾಲೆಯಲ್ಲಿ ನಡೆಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.