ADVERTISEMENT

ಕೇರಳ: ಮಿದುಳು ತಿನ್ನುವ ಅಮೀಬಾ ಸೋಂಕಿಗೆ 5 ದಿನದಲ್ಲಿ 4 ಮಂದಿ ಸಾವು

ಪಿಟಿಐ
Published 5 ನವೆಂಬರ್ 2025, 14:40 IST
Last Updated 5 ನವೆಂಬರ್ 2025, 14:40 IST
   

ತಿರುವನಂತಪುರ:  ‘ಮಿದುಳು ತಿನ್ನುವ ಅಮೀಬಾ’ (ಅಮೀಬಿಕ್‌ ಮೆನಿಂಗೊಎನ್ಸೆಫಲೈಟಿಸ್) ಸೋಂಕಿಗೆ ತುತ್ತಾಗಿ ಕೇರಳದಲ್ಲಿ ಕಳೆದ ಐದು ದಿನಗಳಲ್ಲೇ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಈ ಬೆಳವಣಿಗೆಯು ಸೋಂಕು ಹೆಚ್ಚಳದ ಭೀತಿ ಸೃಷ್ಟಿಸಿದೆ. 

ಅಮೀಬಿಕ್‌ ಮೆನಿಂಗೊ ಎನ್ಸೆಫಲೈಟಿಸ್‌ ಅಪರೂಪದ ಸೋಂಕು ಆಗಿದ್ದು, ಇದು ಕಲುಷಿತ ನೀರಿನಿಂದ ಹರಡುತ್ತದೆ ಎಂದು ಹೇಳಲಾಗುತ್ತದೆ.

ಆದರೆ, ಇತ್ತೀಚೆಗೆ ಸೋಂಕಿಗೆ ತುತ್ತಾದವರ ಪೈಕಿ ಹಲವರು ಕಲುಷಿತ ನೀರಿನ ಸೇವನೆ ಅಥವಾ ಬಳಕೆ ಮಾಡಿಲ್ಲ. ಹಾಗಿದ್ದರೂ ಸೋಂಕಿಗೆ ತುತ್ತಾಗಿರುವುದು ಹಾಗೂ ಮೃತರಲ್ಲಿ ಬಹುತೇಕರು ವಯಸ್ಸಾದ ವ್ಯಕ್ತಿಗಳೇ ಆಗಿರುವುದು ಮತ್ತಷ್ಟು ಆತಂಕ ಹೆಚ್ಚಿಸಿದೆ. 

ADVERTISEMENT

ಆರೋಗ್ಯ ಇಲಾಖೆ ಮಾತ್ರ, ಸೋಂಕು ಹರಡುವುದಕ್ಕೆ ಕಲುಷಿತ ನೀರಿನ ಜಲಮೂಲಗಳು ಮತ್ತು ಪರಿಸರ ವ್ಯವಸ್ಥೆಯೇ ಪ್ರಮುಖ ಕಾರಣ ಎಂದಿದೆ.

ಪ್ರಸಕ್ತ ವರ್ಷ 160 ಮಂದಿಗೆ ಅಮೀಬಿಕ್‌ ಮೆನಿಂಗೊಎನ್ಸೆಫಲೈಟಿಸ್‌ ದೃಢಪಟ್ಟಿದ್ದು, ಈ ಪೈಕಿ 37 ಮಂದಿ ಮೃತಪಟ್ಟಿದ್ದಾರೆ ಎಂದೂ ಇಲಾಖೆ ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.