ADVERTISEMENT

ಅಸ್ಸಾಂನಲ್ಲಿ ನಾಲ್ಕು ಗ್ರೆನೇಡ್ ಸ್ಫೋಟ

ಪಿಟಿಐ
Published 26 ಜನವರಿ 2020, 5:21 IST
Last Updated 26 ಜನವರಿ 2020, 5:21 IST
ಗ್ರೆನೇಡ್ ಸ್ಫೋಟಗೊಂಡ ಸ್ಥಳದಲ್ಲಿ ತಪಾಸಣೆ  (ಎಎನ್‌ಐ ಚಿತ್ರ)
ಗ್ರೆನೇಡ್ ಸ್ಫೋಟಗೊಂಡ ಸ್ಥಳದಲ್ಲಿ ತಪಾಸಣೆ (ಎಎನ್‌ಐ ಚಿತ್ರ)   

ದಿಬ್ರುಗಡ: ಅಸ್ಸಾಂನ ದಿಬ್ರುಗಡದಲ್ಲಿ ಮತ್ತು ಚಿರೈದೊ ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ ಗ್ರೆನೇಡ್ ಸ್ಫೋಟ ಸಂಭವಿಸಿದೆ.

ದೇಶದಾದ್ಯಂತ ಗಣರಾಜ್ಯೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ದಿಬ್ರುಗಡದ ಗ್ರಹಾಂ ಬಜಾರ್, ಎಟಿ ರಸ್ತೆಯಲ್ಲಿರುವ ಗುರುದ್ವಾರ ಬಳಿ ಗ್ರೆನೇಡ್ ಸ್ಫೋಟಗೊಂಡಿದೆ.

ದುಲಿಯಜನ್ ಎಂಬಲ್ಲಿ ಇನ್ನೊಂದು ಸ್ಫೋಟ ಸಂಭವಿಸಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಚಿರೈದೊ ಜಿಲ್ಲೆಯ ಟೋಕ್ ಘಾಟ್‌ನಲ್ಲಿ ಸ್ಫೋಟ ಸಂಭವಿಸಿದ್ದು, ಸಾವು ನೋವುಗಳ ಬಗ್ಗೆ ವರದಿಯಾಗಿಲ್ಲ.

ADVERTISEMENT

ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗ್ರೆನೇಡ್ ಎಸೆದು ಹೋಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.