ADVERTISEMENT

ದಿಂಡಿಗಲ್‌ನಲ್ಲಿ ಬಸ್‌–ವ್ಯಾನ್‌ ಡಿಕ್ಕಿ: 4 ಸಾವು

ಪಿಟಿಐ
Published 29 ಮಾರ್ಚ್ 2021, 9:38 IST
Last Updated 29 ಮಾರ್ಚ್ 2021, 9:38 IST

ದಿಂಡಿಗಲ್‌ (ತಮಿಳುನಾಡು): ದಿಂಡಿಗಲ್‌ ಜಿಲ್ಲೆಯ ವತಲಕುಂಡು ಎಂಬಲ್ಲಿ ಸೋಮವಾರ ವ್ಯಾನ್‌ ಮತ್ತು ಬಸ್‌ ಮುಖಾಮುಖಿ ಡಿಕ್ಕಿ ಹೊಡೆದುದರಿಂದ ನಾಲ್ವರು ಮೃತಪಟ್ಟಿದ್ದು, 60ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ವ್ಯಾನ್‌ನಲ್ಲಿ ಕಾರ್ಖಾನೆಯೊಂದರ ಕಾರ್ಮಿಕರನ್ನು ಕರೆದೊಯ್ಯಲಾಗುತ್ತಿತ್ತು. ಗಾಯಗೊಂಡವರ ಪೈಕಿ ಎಂಟು ಮಂದಿಯ ಸ್ಥಿತಿ ಗಂಭೀರವಾಗಿದೆ, ಮೃತರಲ್ಲಿ ವ್ಯಾನ್‌ನ ಚಾಲಕನೂ ಸೇರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT