ADVERTISEMENT

ಕಾಂಗ್ರೆಸ್‌ ಜಿಲ್ಲಾ ಚುನಾವಣೆಗೆ ಹರಿಪ್ರಸಾದ್ ಸೇರಿ ರಾಜ್ಯದ ನಾಲ್ವರು ವೀಕ್ಷಕರು

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2025, 15:34 IST
Last Updated 12 ಏಪ್ರಿಲ್ 2025, 15:34 IST
<div class="paragraphs"><p>ಕಾಂಗ್ರೆಸ್‌ ಪಕ್ಷದ ಧ್ವಜ</p></div>

ಕಾಂಗ್ರೆಸ್‌ ಪಕ್ಷದ ಧ್ವಜ

   

ನವದೆಹಲಿ: ಎಐಸಿಸಿ ಅಧಿವೇಶನದಲ್ಲಿ ತೆಗೆದುಕೊಂಡ ನಿರ್ಣಯದಂತೆ ಪಕ್ಷದ ಜಿಲ್ಲಾ ಸಮಿತಿಗಳ ಪುನರ್‌ರಚನೆಯ ಪ್ರಕ್ರಿಯೆಯನ್ನು ಕಾಂಗ್ರೆಸ್‌ ಇದೇ 15ರಿಂದ ನಡೆಸಲಿದೆ. ಗುಜರಾತ್‌ನಲ್ಲಿ ಈ ಪ್ರಕ್ರಿಯೆ ನಡೆಸಲು ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಸೇರಿ 43 ಎಐಸಿಸಿ ವೀಕ್ಷಕರು ಹಾಗೂ 183 ಪಿಸಿಸಿ ವೀಕ್ಷಕರನ್ನು ಪಕ್ಷ ಶನಿವಾರ ನೇಮಿಸಿದೆ. 

ಕಾಂಗ್ರೆಸ್ ತನ್ನ ಜಿಲ್ಲಾಧ್ಯಕ್ಷರ ನೇಮಕ ಪ್ರಕ್ರಿಯೆಗೆ ವೀಕ್ಷಕರನ್ನು ನೇಮಿಸುತ್ತಿರುವುದು ಇದೇ ಮೊದಲು. ಇಲ್ಲಿಯವರೆಗೆ, ರಾಜ್ಯ ನಾಯಕತ್ವವನ್ನು ಸಂಪರ್ಕಿಸಿದ ನಂತರ ಕಾಂಗ್ರೆಸ್ ಅಧ್ಯಕ್ಷರು ಈ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದರು. 

ADVERTISEMENT

ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮೇಲ್ವಿಚಾರಣೆ ಮಾಡುವ ಕಾರ್ಯವನ್ನು ಹೊಂದಿರುವ 43 ಎಐಸಿಸಿ ವೀಕ್ಷಕರಲ್ಲಿ ರಾಜ್ಯದ ಬಿ.ಕೆ. ಹರಿಪ್ರಸಾದ್, ಬಿ.ಎಂ. ಸಂದೀಪ್, ಸೂರಜ್ ಹೆಗ್ಡೆ ಮತ್ತು ಬಿ.ವಿ. ಶ್ರೀನಿವಾಸ್ ಇದ್ದಾರೆ. 

ಗುಜರಾತ್‌ನಲ್ಲಿ ಪಕ್ಷದ 41 ಜಿಲ್ಲಾ ಸಮಿತಿಗಳಿವೆ. ಪ್ರತಿ ಜಿಲ್ಲಾ ಸಮಿತಿಗೆ ನಾಲ್ವರು ಪಿಸಿಸಿ ವೀಕ್ಷಕರನ್ನು ನೇಮಕ ಮಾಡಲಾಗಿದೆ. ಎಐಸಿಸಿ ವೀಕ್ಷಕರೊಬ್ಬರು ಸಂಚಾಲಕರಾಗಿರುವರು. ಗುಜರಾತ್‌ಗೆ ಈಗಾಗಲೇ ನಿಯೋಜನೆಗೊಂಡಿರುವ ನಾಲ್ವರು ಎಐಸಿಸಿ ಕಾರ್ಯದರ್ಶಿಗಳು ಆಯಾ ವಲಯಗಳಲ್ಲಿ ಈ ಪ್ರಕ್ರಿಯೆ ಸಂಘಟಿಸುತ್ತಾರೆ.

ಎಲ್ಲ ವೀಕ್ಷಕರ ಮೊದಲ ಸಭೆ ಇದೇ 15ರಂದು ಗುಜರಾತ್‌ನ ಅರಾವಳಿ ಜಿಲ್ಲೆಯ ಮೋಡಸಾದಲ್ಲಿ ನಡೆಯಲಿದೆ ಎಂದು ಎಐಸಿಸಿ ತಿಳಿಸಿದೆ. ಕಾಂಗ್ರೆಸ್‌ ಪಕ್ಷವು ತನ್ನ ಜಿಲ್ಲಾ ಸಮಿತಿಗಳ ಅಧ್ಯಕ್ಷರ ನೇಮಕ ಪ್ರಕ್ರಿಯೆಗೆ ವೀಕ್ಷಕರನ್ನು ನೇಮಿಸಿರುವುದು ಇದೇ ಮೊದಲು.

ಕರ್ನಾಟಕದ ನಾಲ್ವರು:

ಎಐಸಿಸಿಯ 43 ವೀಕ್ಷಕರಲ್ಲಿ ಬಿ.ಕೆ.ಹರಿಪ್ರಸಾದ್‌, ಬಿ.ಎಂ.ಸಂದೀಪ್‌, ಸೂರಜ್‌ ಹೆಗ್ಡೆ ಮತ್ತು ಬಿ.ವಿ.ಶ್ರೀನಿವಾಸ್‌ ಕರ್ನಾಟಕದವರಾಗಿದ್ದಾರೆ. ಇವರು ಜಿಲ್ಲಾ ಕಾಂಗ್ರೆಸ್‌ ಸಮಿತಿಗಳ ಅಧ್ಯಕ್ಷರ ಆಯ್ಕೆ, ನೇಮಕಾತಿ ಪ್ರಕ್ರಿಯೆಗಳ ಮೇಲ್ವಿಚಾರಣೆ ವಹಿಸಲಿದ್ದಾರೆ. 

ಗುಜರಾತ್‌ನ 41 ಜಿಲ್ಲಾ ಸಮಿತಿಗಳಿಗೆ ಪಿಸಿಸಿಯ ನಾಲ್ವರು ವೀಕ್ಷಕರ ಗಂಪನ್ನು ನಿಯೋಜಿಸಲಾಗಿದೆ. ಅದರ ಸಂಚಾಲಕರಾಗಿ ಎಐಸಿಸಿಯ ವೀಕ್ಷಕರು ಕಾರ್ಯ ನಿರ್ವಹಿಸಲಿದ್ದಾರೆ. ಎಐಸಿಸಿ ಅಧಿವೇಶನದಲ್ಲಿ ತೆಗೆದುಕೊಂಡ ನಿರ್ಣಯದಂತೆ ಜಿಲ್ಲಾ ಸಮಿತಿಗಳ ಪುನರ್‌ರಚನೆಗೆ ಕಾಂಗ್ರೆಸ್‌ ಕ್ರಮ ತೆಗೆದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.