ಜಮ್ಮು: ಕಾರು ಆಳದ ಕಮರಿಗೆ ಉರುಳಿದ ಪರಿಣಾಮ ಮಸೀದಿಯ ಇಮಾಮ್ ಮತ್ತು ಕುಟುಂಬದ ಮೂವರು ಸದಸ್ಯರು ಮೃತಪಟ್ಟಿರುವ ಘಟನೆ ಜಮ್ಮು ಮತ್ತು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ನಡೆದಿದೆ.
ಉಧಮ್ ಪುರ್ ಜಿಲ್ಲೆಯ ಚೆನಾನಿ ಪ್ರದೇಶದ ಪ್ರೇಮ್ ಮಂದಿರದ ಬಳಿ ಬೆಳಿಗ್ಗೆ 8.30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಇಮಾಮ್ ಕುಟುಂಬವು ರಂಬನ್ ಜಿಲ್ಲೆಯ ಗೂಲ್ ಸಂಗಲ್ದಾನ್ ಗ್ರಾಮದಿಂದ ಜಮ್ಮುವಿಗೆ ತೆರಳುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ಧಾರೆ.
ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಕಿಡ್ ಆದ ಕಾರು 700 ಅಡಿ ಕಮರಿಗೆ ಬಿದ್ದಿದೆ ಎಂದು ಅವರು ಹೇಳಿದ್ದಾರೆ.
ಸಂಗಲ್ದಾನ್ ಗ್ರಾಮದ ಜಾಮಿಯಾ ಮಸೀದಿಯ ಇಮಾಮ್ ಮುಫ್ತಿ ಅಬ್ದಲು ಹಮೀದ್(32), ಅವರ ತಂದೆ ಮುಫ್ತಿ ಜಮಾಲ್ ದಿನ್(65) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಾಯಿ ಹಜರಾ ಬೇಗಂ(60), ಸೋದರ ಸಂಬಂಧಿ ಆದಿಲ್ ಗುಲ್ಜಾರ್(16) ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.