ADVERTISEMENT

ಅಸ್ಸಾಂ: ಪ್ರವಾಹದಲ್ಲಿ ಸಿಲುಕಿ 76 ಪ್ರಾಣಿಗಳು ಸಾವು

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 10:30 IST
Last Updated 16 ಜುಲೈ 2020, 10:30 IST
ಕಾಜೀರಂಗ ರಾಷ್ಟ್ರೀಯ ಉದ್ಯಾನದಲ್ಲಿ ಪ್ರವಾಹ
ಕಾಜೀರಂಗ ರಾಷ್ಟ್ರೀಯ ಉದ್ಯಾನದಲ್ಲಿ ಪ್ರವಾಹ   

ಗುವಾಹಟಿ: ಅಸ್ಸಾಂನಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ನೀರಿನಲ್ಲಿ ಸಿಲುಕಿಕಾಜಿರಂಗ ರಾಷ್ಟ್ರೀಯ ಉದ್ಯಾನದ ನಾಲ್ಕು ಖಡ್ಗಮೃಗ ಸೇರಿದಂತೆ ಒಟ್ಟು76 ಪ್ರಾಣಿಗಳು ಮೃತಪಟ್ಟಿವೆ.

18 ಜಿಂಕೆ ಸೇರಿದಂತೆ 31 ಪ್ರಾಣಿಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. 12 ಪ್ರಾಣಿಗಳು ಗಾಬರಿಗೊಂಡು ಉದ್ಯಾನದ ಬಳಿಯಿರುವ ರಾಷ್ಟ್ರೀಯ ಹೆದ್ದಾರಿ 37 ಅನ್ನು ದಾಟುತ್ತಿದ್ದಾಗ ವಾಹನಗಳು ಡಿಕ್ಕಿ ಹೊಡೆದು ಸಾವನ್ನಪ್ಪಿವೆ ಎಂದುಕಾಜಿರಂಗ ರಾಷ್ಟ್ರೀಯ ಉದ್ಯಾನದ ಅಧಿಕಾರಿಗಳು ತಿಳಿಸಿದರು.

ಕಾಜಿರಂಗ ರಾಷ್ಟ್ರೀಯ ಉದ್ಯಾನವು ಈಗಾಗಲೇಶೇ 90ರಷ್ಟು ಜಲಾವೃತಗೊಂಡಿದೆ. ಪ್ರಾಣ ರಕ್ಷಣೆಗಾಗಿ ಉದ್ಯಾನದಿಂದ ಬಡೊರ್ಡೊಬಿ ಗ್ರಾಮಕ್ಕೆ ಬಂದಿದ್ದ ’ರಾಯಲ್‌ ಬೆಂಗಾಳ್’‌ ಹುಲಿಯೊಂದನ್ನು ಸೆರೆ ಹಿಡಿದುವನ್ಯಜೀವಿ ಪುನರ್ವಸತಿ ಮತ್ತು ಸಂರಕ್ಷಣೆ ಕೇಂದ್ರಕ್ಕೆ ತಲು‍ಪಿಸಲಾಗಿದೆ. ಅಲ್ಲದೆ 24 ಗಂಟೆಗಳ ಕಾಲ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಖಡ್ಗಮೃಗದ ಮರಿಯನ್ನು ರಕ್ಷಿಸಲಾಗಿದೆ.

ADVERTISEMENT

ಕಳೆದ 24 ಗಂಟೆಗಳಲ್ಲಿ ಪ್ರವಾಹದಲ್ಲಿ ಸಿಲುಕಿ ಇಬ್ಬರು ಮೃತಪಟ್ಟಿದ್ದು ಇದುವರೆಗೆ ಸತ್ತವರ ಸಂಖ್ಯೆ 68ಕ್ಕೆ ಏರಿಕೆಯಾಗಿದೆ ಎಂದು ಅಸ್ಸಾಂ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.