ADVERTISEMENT

ನೊಯಿಡಾ: ಹೌಸಿಂಗ್ ಸೊಸೈಟಿ ಗೋಡೆ ಕುಸಿದು ನಾಲ್ವರು ಸಾವು, ಹಲವರು ಸಿಲುಕಿರುವ ಶಂಕೆ

ಪಿಟಿಐ
Published 20 ಸೆಪ್ಟೆಂಬರ್ 2022, 6:48 IST
Last Updated 20 ಸೆಪ್ಟೆಂಬರ್ 2022, 6:48 IST
ನೊಯಿಡಾ: ಜಲ್‌ ವಾಯು ವಿಹಾರದ ಹೌಸಿಂಗ್‌ ಸೊಸೈಟಿಯ ತಡೆಗೋಡೆ ಕುಸಿತಗೊಂಡ ಬಳಿಕ ನಡೆಸಲಾಗುತ್ತಿರುವ ರಕ್ಷಣಾ ಕಾರ್ಯಾಚರಣೆ. | ಪಿಟಿಐ ಚಿತ್ರ
ನೊಯಿಡಾ: ಜಲ್‌ ವಾಯು ವಿಹಾರದ ಹೌಸಿಂಗ್‌ ಸೊಸೈಟಿಯ ತಡೆಗೋಡೆ ಕುಸಿತಗೊಂಡ ಬಳಿಕ ನಡೆಸಲಾಗುತ್ತಿರುವ ರಕ್ಷಣಾ ಕಾರ್ಯಾಚರಣೆ. | ಪಿಟಿಐ ಚಿತ್ರ   

ನೊಯಿಡಾ: ಹೌಸಿಂಗ್‌ ಸೊಸೈಟಿಯ ತಡೆ ಗೋಡೆ ಕುಸಿದು ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ. ಮಂಗಳವಾರ ಬೆಳಗ್ಗೆ ದುರ್ಘಟನೆ ಸಂಭವಿಸಿದೆ.

ನೊಯಿಡಾ ಸೆಕ್ಟರ್‌ 21ರ ಜಲ್‌ ವಾಯು ವಿಹಾರ್‌ ಪ್ರದೇಶದ ಹೌಸಿಂಗ್‌ ಸೊಸೈಟಿಯ ತಡೆ ಗೋಡೆ ಕುಸಿದಿದೆ. ಹಲವು ಕಾರ್ಮಿಕರು ಕಟ್ಟಡದ ಅವಶೇಷಗಳಡಿ ಸಿಲುಕಿರುವಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದುವರೆಗೆ 12 ಕಾರ್ಮಿಕರನ್ನು ರಕ್ಷಿಸಲಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ ಎಂದು ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ನಗರಗಳಲ್ಲಿ ಕಟ್ಟಡ ಕುಸಿತ, ಅಗ್ನಿ ಅನಾಹುತಗಳು ಸಂಭವಿಸುತ್ತಿರುವ ಅತ್ಯಂತ ಕಳವಳಕಾರಿ ಸಂಗತಿ. ಕಾನೂನನ್ನು ಪಾಲಿಸಿದರೆ ಇಂತಹ ಅವಘಡಗಳನ್ನು ತಪ್ಪಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.