ADVERTISEMENT

ಸಂಗಾತಿಯ ಆಯ್ಕೆ ವೈಯಕ್ತಿಕ ಸ್ವಾತಂತ್ರ್ಯ: ದೆಹಲಿ ಹೈಕೋರ್ಟ್‌

ಪಿಟಿಐ
Published 8 ನವೆಂಬರ್ 2025, 15:39 IST
Last Updated 8 ನವೆಂಬರ್ 2025, 15:39 IST
   

ನವದೆಹಲಿ: ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದು ಸಂವಿಧಾನದ ಅಡಿಯಲ್ಲಿನ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಖಾಸಗಿತನದ ಭಾಗವಾಗಿರುತ್ತದೆ ಹಾಗೂ ಇಬ್ಬರು ವಯಸ್ಕರು ‍ಪರಸ್ಪರ ಒಪ್ಪಿಗೆಯಿಂದ ಆಗುವ ಮದುವೆಗೆ ಪೋಷಕರು ಮತ್ತು ಸಮುದಾಯ ಅಡ್ಡಿಪಡಿಸುವಂತಿಲ್ಲ–

ಇದು ಸುಪ್ರೀಂಕೋರ್ಟ್‌ ತೀರ್ಪೊಂದನ್ನು ಉಲ್ಲೇಖಿಸಿ ದೆಹಲಿ ಹೈಕೋರ್ಟ್‌ ನೀಡಿದ ಅಭಿಪ್ರಾಯ.

‘ಭಾರತದಲ್ಲಿ ಜಾತಿವಾದವು ಪ್ರಬಲವಾದ ಸಾಮಾಜಿಕ ಪರಿಣಾಮವನ್ನು ಉಂಟುಮಾಡುತ್ತಿದೆ ಮತ್ತು ಅಂತರ್ಜಾತಿ ವಿವಾಹವು ಸಮಾನತೆಯನ್ನು ಉತ್ತೇಜಿಸುವ ಮತ್ತು ಜಾತಿ ಆಧಾರದ ವಿಭಜಕತೆಯನ್ನು ಕಡಿಮೆಗೊಳಿಸುವ ಮೂಲಕ ಸಾಂವಿಧಾನಿಕ ಮತ್ತು ಸಮಾಜಿಕ ಕಾರ್ಯವನ್ನು ನಿರ್ವಹಿಸುತ್ತಿದೆ’ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ADVERTISEMENT

‘ಇಬ್ಬರು ವಯಸ್ಕರು ವಿವಾಹವಾಗಲು ಮತ್ತು ಸಹಬಾಳ್ವೆ ನಡೆಸಲು ನಿರ್ಧರಿಸಿದರೆ ಸಮುದಾಯ ಅಥವಾ ಕುಟುಂಬ ಅವರನ್ನು ತಡೆಯುವ, ಒತ್ತಡ ಹೇರುವ ಮತ್ತು ಬೆದರಿಸುವ ಕೆಲಸ ಮಾಡುವಂತಿಲ್ಲ’ ಎಂದು ತಿಳಿಸಿದೆ.

11 ವರ್ಷದಿಂದ ಸಂಪರ್ಕದಲ್ಲಿದ್ದ ಮತ್ತು ಈಗ ಮದುವೆಯಾಗಲು ನಿರ್ಧರಿಸಿದ್ದ ಅಂತರ್ಜಾತಿಯ ಜೋಡಿಯು ತಮಗೆ ರಕ್ಷಣೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ದೆಹಲಿ ಹೈಕೋರ್ಟ್‌ ಈ ಅಭಿಪ್ರಾಯಗಳನ್ನು ತಿಳಿಸಿತು.

ಜೋಡಿಗೆ ಬೆದರಿಕೆ ಒಡ್ಡಿರುವ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಲಯವು ಪೊಲೀಸ್‌ ಅಧಿಕಾರಿಗಳಿಗೆ ನಿರ್ದೇಶನ ನೀಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.