ADVERTISEMENT

Republic Day | ಸಿಮ್ರನ್ ಬಾಲಾ: ನೌಶೀರಾದಿಂದ ಕರ್ತವ್ಯಪಥದ ವರೆಗೆ...

ಪಿಟಿಐ
Published 25 ಜನವರಿ 2026, 23:54 IST
Last Updated 25 ಜನವರಿ 2026, 23:54 IST
<div class="paragraphs"><p>ಸಿಮ್ರನ್ ಬಾಲಾ</p></div>

ಸಿಮ್ರನ್ ಬಾಲಾ

   

ರಜೌರಿ/ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿರುವ ಗಡಿ ನಿಯಂತ್ರಣ ರೇಖೆಗಿಂತ ತುಸುವೇ ದೂರದ ನೌಶೀರಾ ಎಂಬ ಹಳ್ಳಿಯಲ್ಲಿ ಜನಿಸಿದ ಸಿಮ್ರನ್ ಬಾಲಾ ಅವರು, ಸೋಮವಾರ ನಡೆಯುವ ಗಣರಾಜ್ಯೋತ್ಸದಲ್ಲಿ ಕರ್ತವ್ಯ ಪಥದಲ್ಲಿ ಎಲ್ಲ ಪುರುಷ ಸಿಆರ್‌ಪಿಎಫ್‌ ಯೋಧರ ತುಕಡಿಯನ್ನು ಮುನ್ನಡೆಸಲಿದ್ದಾರೆ.

ಈ ಹಿಂದೆಯೂ ಮಹಿಳಾ ಅಧಿಕಾರಿಗಳು ಗಣರಾಜ್ಯೋತ್ಸದ ದಿನ ತುಕಡಿಗಳನ್ನು ಮುನ್ನಡೆಸಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರು 140 ಸಿಆರ್‌ಪಿಎಫ್‌ ಯೋಧರು ಇರುವ ದೊಡ್ಡ ತುಕಡಿಯೊಂದನ್ನು ಮುನ್ನಡೆಸಲಿದ್ದಾರೆ. 26 ವರ್ಷದ ಸಿಮ್ರನ್‌ ಈ ಸಾಧನೆಗೆ ಪಾತ್ರರಾಗಿದ್ದಾರೆ.

ADVERTISEMENT

‘ಹೆಣ್ಣುಮಕ್ಕಳನ್ನು ಬೆಂಬಲಿಸಿ ಎಂದು ಎಲ್ಲ ಪೋಷಕರಿಗೆ ಹೇಳಲು ಬಯಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರ ‘ಬೇಟಿ ಬಚಾವೊ, ಬೇಟಿ ಪಡಾವೊ’ನಂಥ ಯೋಜನೆಗಳು ಈಗ ಫಲ ನೀಡುತ್ತಿವೆ. ನಮ್ಮ ಮಗಳ ಸಾಧನೆಯು ನಮಗೆ ಬಹಳ ಹೆಮ್ಮೆ ವಿಚಾರ’ ಎಂದು ಸಿಮ್ರನ್‌ ಅವರ ತಾಯಿ ಶ್ರಿಷ್ಠಾ ದೇವಿ ಸಂತನ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.