ADVERTISEMENT

ರೋಮ್‌ನಲ್ಲಿ ಅ. 30ರಿಂದ ಜಿ–20 ಶೃಂಗಸಭೆ: ಪ್ರಧಾನಿ ಮೋದಿ ಭಾಗಿ

ಪಿಟಿಐ
Published 24 ಅಕ್ಟೋಬರ್ 2021, 8:21 IST
Last Updated 24 ಅಕ್ಟೋಬರ್ 2021, 8:21 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ಇಟಲಿಯ ರಾಜಧಾನಿ ರೋಮ್‌ನಲ್ಲಿ ಇದೇ 30ರಿಂದ ನಡೆಯಲಿರುವ ಜಿ–20 ಶೃಂಗಸಭೆಯಲ್ಲಿ ಅಫ್ಗನ್‌ ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸಲು ಜಾಗತಿಕವಾಗಿ ಸಂಘಟಿತ ಕಾರ್ಯತಂತ್ರದ ಅವಶ್ಯಕತೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಲಿದ್ದಾರೆ ಎಂದು ಮೂಲಗಳು ಭಾನುವಾರ ಹೇಳಿವೆ.

ಈ ವೇಳೆ ಹವಾಮಾನ ಬದಲಾವಣೆ ಮತ್ತು ಕೋವಿಡ್‌ ಪಿಡುಗಿನ ಸವಾಲುಗಳನ್ನು ಎದುರಿಸುವ ಬಗ್ಗೆಯೂ ಮಾತನಾಡಲಿದ್ದಾರೆ ಎಂದೂ ಹೇಳಲಾಗಿದೆ.

ಮೋದಿ ಅವರು ಗುರುವಾರ ಅಥವಾ ಶುಕ್ರವಾರ ಇಟಲಿ ಮತ್ತು ಸ್ಕಾಟ್ಲೆಂಡ್‌ ಪ್ರವಾಸ ಆರಂಭಿಸುವ ಸಾಧ್ಯತೆ ಇದೆ ಎಂದೂ ಮೂಲಗಳು ತಿಳಿಸಿವೆ.

ಶೃಂಗಸಭೆಯಲ್ಲಿ ಅಫ್ಗಾನಿಸ್ತಾನದ ಪರಿಸ್ಥಿತಿಯು ಪ್ರಮುಖವಾಗಿ ಪ್ರಸ್ತಾಪವಾಗುವ ನಿರೀಕ್ಷೆಯಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.