ADVERTISEMENT

ಆರ್ಥಿಕ ವೃದ್ಧಿ ದರ ಪರಿಷ್ಕರಣೆ

ಪಿಟಿಐ
Published 31 ಜನವರಿ 2019, 20:24 IST
Last Updated 31 ಜನವರಿ 2019, 20:24 IST

ನವದೆಹಲಿ:2017–18ನೇ ಹಣಕಾಸು ವರ್ಷದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಬೆಳವಣಿಗೆ ದರವನ್ನು ಕೇಂದ್ರ ಸರ್ಕಾರ ಗುರುವಾರ ಪರಿಷ್ಕರಿಸಿ ಶೇ 7.2ಕ್ಕೆ ಏರಿಕೆ ಮಾಡಿದೆ.

ಇದಕ್ಕೂ ಮೊದಲು ಆರ್ಥಿಕ ವೃದ್ಧಿ ದರವು ಶೇ 6.7ರಷ್ಟು ಇರಲಿದೆ ಎಂದು ಅಂದಾಜಿಸಲಾಗಿತ್ತು. 2011–12ರ ಸ್ಥಿರ ಬೆಲೆ ಆಧರಿಸಿದ 2017–18 ಮತ್ತು 2016–17ನೇ ಹಣಕಾಸು ವರ್ಷಗಳ ನೈಜ ಜಿಡಿಪಿ ಬೆಳವಣಿಗೆ ದರವು, ಕ್ರಮವಾಗಿ ₹131.80 ಲಕ್ಷ ಕೋಟಿ ಹಾಗೂ ₹122.98 ಲಕ್ಷ ಕೋಟಿಗಳಷ್ಟಾಗಿದೆ.

ಹೀಗಾಗಿ ಈ ಎರಡೂ ಹಣಕಾಸು ವರ್ಷಗಳಲ್ಲಿನ ವೃದ್ಧಿ ದರವು ಕ್ರಮವಾಗಿ ಶೇ 7.2 ಹಾಗೂ ಶೇ 8.2ರಷ್ಟು ದಾಖಲಾಗಿದೆ ಎಂದು ಕೇಂದ್ರ ಸಾಂಖ್ಯಿಕ ಕಚೇರಿ (ಸಿಎಸ್‌ಒ) ತಿಳಿಸಿದೆ.

ADVERTISEMENT

2018–19ನೇ ಸಾಲಿನ ಜಿಡಿಪಿ ಬೆಳವಣಿಗೆ ದರವು ಶೇ 7.2ರಷ್ಟು ಇರಲಿದೆ ಎಂದು ಈ ‘ಸಿಎಸ್‌ಒ’ ಇದಕ್ಕೂ ಮೊದಲು ಅಂದಾಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.