ADVERTISEMENT

ಸಚಿನ್ ಪೈಲಟ್‌ ಹೇಳಿಕೆಗೆ ಗಂಭೀರವಾಗಿ ಪರಿಗಣಿಸದ ಅಶೋಕ್‌ ಗೆಹ್ಲೋಟ್‌

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2019, 20:33 IST
Last Updated 16 ಸೆಪ್ಟೆಂಬರ್ 2019, 20:33 IST
ಅಶೋಕ್‌ ಗೆಹ್ಲೋಟ್‌ 
ಅಶೋಕ್‌ ಗೆಹ್ಲೋಟ್‌    

ಕೋಟ (ಪಿಟಿಐ): ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಉಪಮುಖ್ಯಮಂತ್ರಿ ಸಚಿನ್ ಪೈಲಟ್‌ ಅವರು ನೀಡಿದ ಹೇಳಿಕೆ ವಿವಾದ ಸೃಷ್ಟಿಸಿರುವುದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ ಹೇಳಿದ್ದಾರೆ.ಕೆಲವು ವಿಷಯಗಳ ಬಗ್ಗೆ ಪಕ್ಷದ ಮುಖಂಡರು ಹಾಗೆ ಹೇಳುವುದು ಒಳ್ಳೆಯದು ಎಂದಿದ್ದಾರೆ.

ಮಾಧ್ಯಮಗಳು ಇದನ್ನು ಅನಗತ್ಯವಾಗಿ ವಿವಾದ ಮಾಡುತ್ತಿವೆ ಎಂದು ಗೆಹ್ಲೋಟ್‌ ಹೇಳಿದ್ದಾರೆ.

‘ಸಂಚಾರ ಕುರಿತ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಮಾತನಾಡಲು ನಮ್ಮ ಪಕ್ಷದ ಮುಖಂಡರು ಹಿಂದುಮುಂದು ನೋಡದಿರುವುದು ಒಳ್ಳೆಯದು. ಏನಾದರೂ ಹೇಳಿದರೆ ನಮಗೆ ಪ್ರತಿಕ್ರಿಯೆ ಸಿಗುತ್ತದೆ. ಅದನ್ನು ಬೇರೆಯಾಗಿ ನಾನು ಪರಿಗಣಿಸುವುದಿಲ್ಲ’ ಎಂದು ಹೇಳಿದರು.

ADVERTISEMENT

‘ರಾಜ್ಯದ ಕೆಲವು ಭಾಗದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ’ ಎಂದು ಸಚಿನ್‍ಪೈಲಟ್‌ ಅವರು ಕಳೆದ ವಾರ ಹೇಳಿದ್ದರು. ಇಂತಹ ತೊಂದರೆಯನ್ನು ಉತ್ತಮಪಡಿಸುವ ಅಗತ್ಯವೂ ಇದೆ ಎಂದು ಹೇಳಿದ್ದರು.

ಸಚಿನ್‌ ಹೇಳಿಕೆ ಗೃಹ ಖಾತೆಯನ್ನೂ ಹೊಂದಿರುವ ಗೆಹ್ಲೋಟ್‌ ಅವರ ಕಾರ್ಯವೈಖರಿ ಕುರಿತೇ ಹೇಳಿದ್ದು ಎನ್ನಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.