ADVERTISEMENT

ಭಾರತಕ್ಕೆ ಆಗಮಿಸಲಿರುವ ಜರ್ಮನಿ ವಿದೇಶಾಂಗ ಸಚಿವೆ: ಜಾಗತಿಕ ವಿಷಯಗಳ ಕುರಿತು ಚರ್ಚೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಡಿಸೆಂಬರ್ 2022, 1:50 IST
Last Updated 5 ಡಿಸೆಂಬರ್ 2022, 1:50 IST
ಜೈಶಂಕರ್‌, ಬೇರ್ಬಾಕ್
ಜೈಶಂಕರ್‌, ಬೇರ್ಬಾಕ್   

ನವದೆಹಲಿ: ಚೀನಾ, ರಷ್ಯಾದೊಂದಿಗೆ ಭಾರತದ ಸಂಬಂಧಗಳು ಹಾಗೂಭಾರತ ಮತ್ತು ಜರ್ಮನಿ ನಡುವಿನ ಅಭಿವೃದ್ಧಿ ಸಹಕಾರ ಕುರಿತು ಚರ್ಚೆ ನಡೆಸಲುಜರ್ಮನಿಯ ವಿದೇಶಾಂಗ ಸಚಿವೆ ಅನ್ನಾಲೆನಾ ಬೇರ್ಬಾಕ್ ಅವರು ಭಾರತಕ್ಕೆ ಆಗಮಿಸಲಿದ್ದಾರೆ.

ಎರಡು ದಿನಗಳ ಭೇಟಿಗಾಗಿಅನ್ನಾಲೆನಾ ಬೇರ್ಬಾಕ್ ಭಾರತಕ್ಕೆ ಬರಲಿದ್ದು ವಿದೇಶಾಂಗ ಸಚಿವ ಜೈಶಂಕರ್‌ ಜೊತೆ ಮಾತುಕತೆ ನಡೆಸಲಿದ್ದಾರೆ ಎಂದು ಜರ್ಮನಿಯ ರಾಯಭಾರಿ ಕಚೇರಿಯ ಪ್ರಕಟಣೆ ತಿಳಿಸಿದೆ.

ಅನ್ನಾಲೆನಾ ಬೇರ್ಬಾಕ್ ಭಾರತಕ್ಕೆ ಭೇಟಿ ನೀಡಲಿರುವ ದಿನಾಂಕ ಇನ್ನು ನಿಗದಿಯಾಗಿಲ್ಲ ಎಂದು ವರದಿಯಾಗಿದೆ.

ADVERTISEMENT

ರಷ್ಯಾ–ಉಕ್ರೆನ್‌ ಸಂಘರ್ಷದ ಜಾಗತಿಕ ಪರಿಣಾಮಗಳು, ಗಾಲ್ವಾನ್ ಕಣಿವೆ ಘಟನೆಗಳು, ಚೀನಾದೊಂದಿಗೆ ಭಾರತದ ಸಂಬಂಧಗಳ ಕುರಿತು ಉಭಯ ದೇಶಗಳ ಸಚಿವರು ಚರ್ಚೆ ಮಾಡಲಿದ್ದಾರೆ ಎಂದುಭಾರತಕ್ಕೆ ಜರ್ಮನ್ ರಾಯಭಾರ ಕಚೇರಿ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಇಂಡೊ-ಪೆಸಿಫಿಕ್ ವಲಯದಲ್ಲಿನ ಸಹಕಾರ ಕುರಿತು ಸಹ ಸಚಿವರು ಚರ್ಚೆ ಮಾಡಲಿದ್ದಾರೆ.ಅನ್ನಾಲೆನಾ ಬೇರ್ಬಾಕ್ ತಮ್ಮ ಭೇಟಿ ಸಮಯದಲ್ಲಿಭಾರತೀಯ ಚುನಾವಣಾ ಆಯೋಗಕ್ಕೆ ಭೇಟಿ ನೀಡಲಿದ್ದಾರೆ. ಮಹಿಳಾ ಹಕ್ಕುಗಳಿಗಾಗಿ ಕೆಲಸ ಮಾಡುವ ಇಲ್ಲಿನ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳೊಂದಿಗೂ ಅವರು ಮಾತನಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.