ADVERTISEMENT

ಜರ್ಮನಿ: ಭಾರತದ ಐಟಿ ನೌಕರರಿಗೆ ವೀಸಾ ಸರಾಗ

ಏಜೆನ್ಸೀಸ್
Published 26 ಫೆಬ್ರುವರಿ 2023, 16:09 IST
Last Updated 26 ಫೆಬ್ರುವರಿ 2023, 16:09 IST
ಸಂಗ್ರಹ ಚಿತ್ರ 
ಸಂಗ್ರಹ ಚಿತ್ರ    

ಬರ್ಲಿನ್: ‘ಜರ್ಮನಿಯಲ್ಲಿ ಕುಶಲತೆ ಹೊಂದಿದ ಕಾರ್ಮಿಕರ ಕೊರತೆಯಿದ್ದು, ಭಾರತದಿಂದ ಜರ್ಮನಿಗೆ ಬರುವ ಐ.ಟಿ. ತಂತ್ರಜ್ಞರಿಗೆ ಕೆಲಸದ ವೀಸಾಗಳನ್ನು ಪಡೆಯುವುದನ್ನು ನಮ್ಮ ಸರ್ಕಾರವು ಸುಲಭಗೊಳಿಸಲು ಬಯಸುತ್ತದೆ’ ಎಂದು ಜರ್ಮನಿಯ ಚಾನ್ಸಲರ್ ಓಲಾಫ್ ಸ್ಕೋಲ್ಜ್ ಭಾನುವಾರ ತಿಳಿಸಿದ್ದಾರೆ.

‘ಸಾಫ್ಟ್‌ವೇರ್ ಡೆವಲಪರ್‌ಗಳಿಗೆ ಮತ್ತು ಐ.ಟಿ ಅಭಿವೃದ್ಧಿ ಕೌಶಲ ಹೊಂದಿರುವವರಿಗೆ ಜರ್ಮನಿಯು ಹೆಚ್ಚು ಆಕರ್ಷಕವಾಗಿದ್ದು, ಈ ನಿಟ್ಟಿನಲ್ಲಿ ಕಾನೂನು ಚೌಕಟ್ಟನ್ನು ಸುಧಾರಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ’ ಎಂದೂ ಅವರು ಹೇಳಿದ್ದಾರೆ.

‘ನಾವು ವೀಸಾಗಳನ್ನು ನೀಡುವುದನ್ನು ಸುಲಭಗೊಳಿಸಲು ಬಯಸುತ್ತೇವೆ’ ಎಂದು ಓಲಾಫ್ ಅವರು ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.