ADVERTISEMENT

ಪ್ರಧಾನಿ ಮೋದಿ ಸ್ವೀಕರಿಸಿರುವ ಸ್ಮರಣಿಕೆ, ಉಡುಗೊರೆಗಳು ನಾಳೆಯಿಂದ ಇ-ಹರಾಜು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಸೆಪ್ಟೆಂಬರ್ 2021, 13:57 IST
Last Updated 16 ಸೆಪ್ಟೆಂಬರ್ 2021, 13:57 IST
ಪ್ರಧಾನ ಮಂತ್ರಿ ನರೇಂದ್ರ ಮೋದಿ: ಪಿಟಿಐ ಚಿತ್ರ
ಪ್ರಧಾನ ಮಂತ್ರಿ ನರೇಂದ್ರ ಮೋದಿ: ಪಿಟಿಐ ಚಿತ್ರ   

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸ್ವೀಕರಿಸಿರುವ ಉಡುಗೊರೆಗಳು ಮತ್ತು ಸ್ಮರಣಿಕೆಗಳನ್ನು ಸೆಪ್ಟೆಂಬರ್ 17 ರಿಂದ ಇ-ಹರಾಜು ಹಾಕಲಾಗುವುದು ಎಂದು ಕೇಂದ್ರದ ಸಂಸ್ಕೃತಿ ಸಚಿವಾಲಯ ತಿಳಿಸಿದೆ.

ಈ ಸ್ಮರಣಿಕೆಗಳಲ್ಲಿ ಪದಕ ವಿಜೇತ ಒಲಿಂಪಿಕ್ ಕ್ರೀಡಾಪಟುಗಳು ಮತ್ತು ಪ್ಯಾರಾಲಿಂಪಿಕ್ ಕ್ರೀಡಾಪಟುಗಳ ಕ್ರೀಡಾ ಸಾಧನಗಳು, ಉಪಕರಣಗಳು, ಅಯೋಧ್ಯೆ ರಾಮ ಮಂದಿರ, ಚಾರ್ ಧಾಮ್, ರುದ್ರಾಕ್ಷ್ ಸಮಾವೇಶ ಕೇಂದ್ರದ ಪ್ರತಿರೂಪಗಳು, ಮಾದರಿಗಳು, ಶಿಲ್ಪಗಳು, ವರ್ಣಚಿತ್ರಗಳು, ಅಂಗವಸ್ತ್ರ ಮೊದಲಾದವುಗಳು ಸೇರಿವೆ.

ನಾಳೆಯಿಂದ ಅಕ್ಟೋಬರ್ 07, 2021ರ ನಡುವೆವ್ಯಕ್ತಿಗಳು/ಸಂಸ್ಥೆಗಳು https://pmmementos.gov.in ವೆಬ್‌ ಸೈಟ್ ಮೂಲಕ ಇ -ಹರಾಜಿನಲ್ಲಿ ಭಾಗವಹಿಸಬಹುದು.

ADVERTISEMENT

ಈ ಇ-ಹರಾಜಿನಿಂದ ಬರುವ ಹಣವನ್ನು ಗಂಗಾ ನದಿಯ ಪುನಶ್ಚೇತನ ಮತ್ತು ಸಂರಕ್ಷಣೆಯ ಉದ್ದೇಶ ಹೊಂದಿರುವ ನಮಾಮಿ ಗಂಗೆ ಅಭಿಯಾನಕ್ಕೆ ಬಳಸಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.