ADVERTISEMENT

ಬಲಿಯಾ: ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ

ಪಿಟಿಐ
Published 10 ಮಾರ್ಚ್ 2024, 14:57 IST
Last Updated 10 ಮಾರ್ಚ್ 2024, 14:57 IST
   

ಬಲಿಯಾ: ಉತ್ತರಪ್ರದೇಶದ ಬಲಿಯಾ ಜಿಲ್ಲೆಯ ಗ್ರಾಮವೊಂದರಲ್ಲಿ ಇಬ್ಬರು ಬಾಲಕರು, ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದರು.

‘ಮಾರ್ಚ್‌ 7ರಂದು ಈ ಕೃತ್ಯ ನಡೆದಿದ್ದು, ಬಾಲಕಿಯ ತಂದೆ ನೀಡಿರುವ ದೂರಿನ ಆಧಾರದಲ್ಲಿ ಬಾಲಕರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ’ ಎಂದು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ದುರ್ಗಾ ಪ್ರಸಾದ್‌ ತಿವಾರಿ ವಿವರಿಸಿದರು.

‘ತನಿಖೆ ನಡೆಯುತ್ತಿದ್ದು, ಬಾಲಕರನ್ನು ಇದುವರೆಗೆ ಬಂಧಿಸಿಲ್ಲ’ ಎಂದು ಅವರು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.