ADVERTISEMENT

ಛತ್ತೀಸ್‌ಗಡ: ಬಾಲಕಿ ಮೇಲೆ 2 ಬಾರಿ ಸಾಮೂಹಿಕ ಅತ್ಯಾಚಾರ– ನಾಲ್ವರ ಬಂಧನ

ಪಿಟಿಐ
Published 8 ಅಕ್ಟೋಬರ್ 2022, 2:25 IST
Last Updated 8 ಅಕ್ಟೋಬರ್ 2022, 2:25 IST
   

ಕೋರ್ಬಾ: ಛತ್ತೀಸ್‌ಗಡದ ಎರಡು ಜಿಲ್ಲೆಗಳಲ್ಲಿ 15 ವರ್ಷದ ಬಾಲಕಿ ಮೇಲೆ ಎರಡು ಬಾರಿ ಸಾಮೂಹಿಕ ಅತ್ಯಾಚಾರ ನಡೆದಿರುವ ಆರೋ‍ಪ ಕೇಳಿಬಂದಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

ಈ ಎರಡೂ ಪ್ರಕರಣಗಳ ಸಂಬಂಧ 22 ವರ್ಷದ ಮಹಿಳೆ ಸೇರಿ 6 ಮಂದಿಯನ್ನು ಆರೋಪಿಗಳೆಂದು ಗುರುತಿಸಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮನೇಂದ್ರ ಘರ್–ಚಿರ್ಮಿರಿ–ಭಾರತ್‌ಪುರ(ಎಂಸಿಬಿ) ಜಿಲ್ಲೆಯ ಚಿರ್ಮಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

4 ತಿಂಗಳ ಹಿಂದೆ ತನ್ನನ್ನು ಪರಿಚಯ ಮಾಡಿಕೊಂಡ ಆರೋಪಿತ ಮಹಿಳೆ ಬಿಲಾಸ್‌ಪುರದ ಹೋಟೆಲ್‌ಗೆ ಕರೆದೊಯ್ದರು. ಅಲ್ಲಿ ಮೂವರು ತನ್ನ ಮೇಲೆ ಅತ್ಯಾಚಾರ ಎಸಗಿದರು. ಬಳಿಕ, ಚಿರ್ಮಿರಿಯ ರಸ್ತೆ ಬದಿಯ ಹೋಟೆಲ್‌ನಲ್ಲಿ ಇಬ್ಬರು ಅತ್ಯಾಚಾರ ಎಸಗಿದರು ಎಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ.

ಈ ಸಂಬಂಧ, ಗುರುವಾರ ಬಾಲಕಿ ಮತ್ತು ಆಕೆಯ ತಾಯಿ ಪೊಲೀಸರನ್ನು ಸಂಪರ್ಕಿಸಿದ ನಂತರ, ಐಪಿಸಿಯ ಸೆಕ್ಷನ್ 363 (ಅಪಹರಣ), 366 ಎ, 376 ಡಿ (ಸಾಮೂಹಿಕ ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಅಡಿಯಲ್ಲಿ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.