ADVERTISEMENT

ಯುವತಿಯರ ವಿವಸ್ತ್ರಗೊಳಿಸಿ ನೃತ್ಯ ಮಾಡಿಸಿದ ಪೊಲೀಸರು: ತನಿಖೆಗೆ ಸಮಿತಿ ರಚನೆ

ಪಿಟಿಐ
Published 3 ಮಾರ್ಚ್ 2021, 11:09 IST
Last Updated 3 ಮಾರ್ಚ್ 2021, 11:09 IST
ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್‌ಮುಖ್‌
ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್‌ಮುಖ್‌    

ಮುಂಬೈ: ‘ಮಹಾರಾಷ್ಟ್ರದ ಜಲ್ಗಾಂವ್‌ನ ಹಾಸ್ಟೆಲ್‌ವೊಂದರಲ್ಲಿ ಪೊಲೀಸರು ಕೆಲ ಯುವತಿಯರನ್ನು ಒತ್ತಾಯಪೂರ್ವಕವಾಗಿ ವಿವಸ್ತ್ರಗೊಳಿಸಿ, ನೃತ್ಯ ಮಾಡಿಸಿರುವುದು ಬೆಳಕಿಗೆ ಬಂದಿದ್ದು, ಈ ಬಗ್ಗೆ ತನಿಖೆ ನಡೆಸಲು ನಾಲ್ವರು ಸದಸ್ಯರ ಉನ್ನತ ಸಮಿತಿ ರಚಿಸಲಾಗಿದೆ’ ಎಂದು ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್‌ಮುಖ್‌ ಅವರು ಬುಧವಾರ ತಿಳಿಸಿದರು.

ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರು ಈ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ದೇಶ್‌ಮುಖ್‌, ಪ್ರಕರಣದ ಬಗ್ಗೆ ತನಿಖೆ ನಡೆಸಲು ಸರ್ಕಾರ ಸಮಿತಿ ರಚಿಸಿದೆ ಎಂದರು.

‘ತನಿಖೆಯ ನೆಪದಲ್ಲಿ ಕೆಲ ಪೊಲೀಸರು ಮತ್ತು ಹೊರಗಿನವರು ಹಾಸ್ಟೆಲ್‌ನೊಳಗೆ ಪ‍್ರವೇಶಿಸಿದ್ದಾರೆ. ಈ ವೇಳೆ ಅವರು ಕೆಲವು ಹುಡುಗಿಯರಿಗೆ ವಸ್ತ್ರ ತೆಗೆದು, ನೃತ್ಯ ಮಾಡುವಂತೆ ಒತ್ತಾಯಿಸಿದ್ದಾರೆ’ ಎಂದು ಜಲ್ಗಾಂವ್‌ ಹಾಸ್ಟೆಲ್‌ನ ಕೆಲ ವಿದ್ಯಾರ್ಥಿಗಳು ದೂರು ಸಲ್ಲಿಸಿದ್ದರು. ಅಲ್ಲದೆ ಈ ಘಟನೆಯ ವಿಡಿಯೊ ತುಣುಕು ಕೂಡ ವೈರಲ್‌ ಆಗಿದೆ.

ADVERTISEMENT

‘ಇದು ಬೇಸರದ ಸಂಗತಿ. ಎರಡು ದಿನಗಳೊಳಗೆ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ. ವರದಿ ಬಂದ ನಂತರ ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದು’ ಎಂದು ದೇಶ್‌ಮುಖ್‌ ತಿಳಿಸಿದರು.

‘ಒಂದು ವೇಳೆ ಈ ಘಟನೆ ಬಗ್ಗೆ ಮಾಧ್ಯಮ ವರದಿ ಮಾತ್ರ ಇದಿದ್ದರೆ, ಪ್ರಕರಣವೇ ಬೇರೆಯಾಗುತ್ತಿತ್ತು. ಆದರೆ ಇಂತಹ ಗಂಭೀರ ಅಪರಾಧ ನಡೆದಿದೆ ಎಂಬುದನ್ನು ಸಾಬೀತು ಪಡಿಸುವ ವಿಡಿಯೊ ಕೂಡ ಇದೆ’ ಎಂದು ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.