ADVERTISEMENT

ಬಿಜೆಪಿ ಸೇರಿದ ಗೋವಾದ ಇಬ್ಬರು ಶಾಸಕರು

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2019, 6:57 IST
Last Updated 27 ಮಾರ್ಚ್ 2019, 6:57 IST
   

ಪಣಜಿ: ಗೋವಾದ ರಾಜಕೀಯ ವಲಯದಲ್ಲಿ ತಡರಾತ್ರಿ ದಿಢೀರ್ ಬೆಳವಣಿಗೆ ನಡೆದಿದ್ದು, ಬಿಜೆಪಿಯ ಮೈತ್ರಿ ಪಕ್ಷ ಎಮ್‌ಜಿಪಿಯ (ಮಹಾರಾಷ್ಟ್ರವಾದಿ ಗೋಮಂತಕ್ ಪಕ್ಷ) ಇಬ್ಬರು ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಗೋವಾದ ಪ್ರವಾಸೋದ್ಯಮ ಸಚಿವ ಮನೋಹರ್ ಅಜಂಗಾವ್ಕರ್, ಉಪಖ್ಯಮಂತ್ರಿ ದೀಪಕ್ ಪಾವಸ್ಕರ್ ಬಿಜೆಪಿಗೆ ಸೇರಿದ ಶಾಸಕರು.

ಇದೀಗ ಗೋವಾದ ಬಿಜೆಪಿಯ ಶಾಸಕರ ಸಂಖ್ಯೆ 12 ರಿಂದ 14ಕ್ಕೆ ಏರಿಕೆಯಾಗಿದೆ.

ADVERTISEMENT

ತಡರಾತ್ರಿ ಸುಮಾರು 1.45ರ ವೇಳೆ ಸ್ಪೀಕರ್ ಮೈಕೇಲ್ ಲೋಬೊ ಅವರನ್ನು ಭೇಟಿ ಮಾಡಿದ ಎಮ್‌ಜಿಪಿಯ ಈ ಇಬ್ಬರು ಶಾಸಕರು ಮೈತ್ರಿ ಪಕ್ಷವನ್ನು ಬಿಜೆಪಿಯೊಳಗೆ ವಿಲೀನಗೊಳಿಸಬೇಕೆಂಬ ಮನವಿ ಪತ್ರ ಸಲ್ಲಿಸಿದ್ದಾರೆ. ಇದರಲ್ಲಿ ಸುದಿನ್ ದಾವಲಿಕರ್ ಮಾತ್ರ ಪತ್ರಕ್ಕೆ ಸಹಿ ಇಲ್ಲ.

ಇವರಿಬ್ಬರ ಸೇರ್ಪಡೆಯನ್ನು ಖಚಿತಗೊಳಿಸಿದ ಲೋಬೋ, ಪತ್ರದಲ್ಲಿ ದಾವಲಿಕರ್ ಅವರ ಸಹಿ ಇಲ್ಲ ಎಂದು ತಿಳಿಸಿದ್ದಾರೆ.

2012ರಲ್ಲಿ ಗೋವಾದಲ್ಲಿ ಎಮ್‌ಜಿಪಿ– ಬಿಜೆಪಿ ಜೊತೆ‌ಮೈತ್ರಿ ಸಾಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.