ADVERTISEMENT

ಆಯುರ್ವೇದ ವೈದ್ಯ ಈಗ ಗೋವಾ ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2019, 14:54 IST
Last Updated 18 ಮಾರ್ಚ್ 2019, 14:54 IST
   

ಪಣಜಿ:ಗೋವಾದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಪ್ರಮೋದ್ ಪಾಂಡುರಂಗ ಸಾವಂತ್ ಮೂಲತಃ ಆಯುರ್ವೇದ ವೈದ್ಯ.46 ವರ್ಷ ವಯಸ್ಸಿನ ಸಾವಂತ್ ಹುಟ್ಟಿದ್ದು 1973 ರ ಏಪ್ರಿಲ್ 24. ಪ್ರಮೋದ್ ಅವರ ತಂದೆ ಪಾಂಡುರಂಗ ಮತ್ತು ತಾಯಿ ಪದ್ಮಿನಿ ಸಾವಂತ್. ಪುಣೆಯ ತಿಲಕ್ ಮಹಾರಾಷ್ಟ್ರ ವಿಶ್ವವಿದ್ಯಾಲಯದಿಂದ ಸಮಾಜ ಸೇವೆ ವಿಷಯದಲ್ಲಿ ಎಂಎ ಪದವಿ ಪಡೆದಿದ್ದಾರೆ. ಇದಲ್ಲದೆ,ಕೋಲ್ಹಾಪುರದ ಗಂಗಾ ಎಜುಕೇಷನ್ ಸೊಸೈಟಿ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಆಯುರ್ವೇದ ವಿಷಯದಲ್ಲಿ ಪದವಿ ಪಡೆದಿದ್ದಾರೆ.

ಇವರ ಪತ್ನಿ ಸುಲಕ್ಷಣ ಸಾವಂತ್ ಗೋವಾದ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಗೋವಾ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆಯಾಗಿ ರಾಜಕೀಯವಾಗಿ ತೊಡಗಿಸಿಕೊಂಡಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಂಕೆಲಮ್ (ಉತ್ತರ ಗೋವಾ)ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಗೋವಾದ ಪಾಲೇ ಪ್ರದೇಶದಲ್ಲಿ ವಾಸವಿರುವ ಪ್ರಮೋದ್ ಸಾವಂತ್ ಕೃಷಿ ಚಟುವಟಿಕೆ, ವ್ಯಾಪಾರದಲ್ಲೂ ಆಸಕ್ತಿ ಹೊಂದಿದ್ದಾರೆ.

ADVERTISEMENT

ಪ್ರಮೋದ್ ಸಾವಂತ್ ಅವರ ಇಮೇಲ್ ವಿಳಾಸ.Email:drpramodsawant73@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.