ADVERTISEMENT

3.11 ಕೆಜಿ ಚಿನ್ನ ಸಾಗಾಣೆ: 11 ಮಂದಿ ವಿರುದ್ಧ ಪ್ರಕರಣ

ಪಿಟಿಐ
Published 31 ಜುಲೈ 2020, 10:08 IST
Last Updated 31 ಜುಲೈ 2020, 10:08 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಹೈದರಾಬಾದ್‌: ಪ್ಯಾಂಟಿನ ಒಳ ಜೇಬಿನಲ್ಲಿಚಿನ್ನ ಬಚ್ಚಿಟ್ಟುಕೊಂಡು ಅಕ್ರಮವಾಗಿ ಸಾಗಿಸಲು ಯತ್ನಿಸಿದ 11 ಮಂದಿ ಪ್ರಯಾಣಿಕರು ಹೈದರಾಬಾದ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾರೆ.

‘ವಂದೇ ಭಾರತ್‌ ಮಿಷನ್‌ ಕಾರ್ಯಕ್ರಮದಡಿ ಗುರುವಾರ ಸೌದಿ ಅರೇಬಿಯಾದಿಂದ ತವರಿಗೆ ಬಂದ ಪ್ರಯಾಣಿಕರಲ್ಲಿ 11 ಮಂದಿ ಅಕ್ರಮವಾಗಿ ಚಿನ್ನ ಸಾಗಿಸಲು ಪ್ರಯತ್ನಿಸಿದ್ದಾರೆ. ಅವರಿಂದ ₹1.66 ಕೋಟಿ ಮೌಲ್ಯದ 3.11 ಕೆ.ಜಿ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಕಸ್ಟಮ್ಸ್‌‌ ಅಧಿಕಾರಿಗಳು ತಿಳಿಸಿದರು.

‘ಕಳ್ಳಸಾಗಣೆ ಆರೋಪದಡಿ 11 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಹೈದರಾಬಾದ್‌ನಿಂದ ಸುಡಾನ್‌ಗೆ 78.5 ಕೆ.ಜಿ ಶ್ರೀಗಂಧವನ್ನು ಕಳ್ಳ ಸಾಗಣೆ ಮಾಡಲು ಯತ್ನಿಸಿದ ಐದು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.