ADVERTISEMENT

ಮಹಾರಾಷ್ಟ್ರದ ಮೀನುಗಾರನನ್ನು ಕೋಟ್ಯಧಿಪತಿಯನ್ನಾಗಿಸಿದ ‘ಘೋಲ್ ಫಿಶ್’

fish

ಮೃತ್ಯುಂಜಯ ಬೋಸ್
Published 1 ಸೆಪ್ಟೆಂಬರ್ 2021, 17:46 IST
Last Updated 1 ಸೆಪ್ಟೆಂಬರ್ 2021, 17:46 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಮಹಾರಾಷ್ಟ್ರದ ಪಾಲ್ಗಾರ್‌ನ ಮುರ್ಬೆಯ ಮೀನುಗಾರ ಚಂದ್ರಕಾಂತ್ ತಾರೆ ಎಂಬವರು ಹಿಡಿದಿದ್ದ ಅಪರೂಪದ ಮೀನುಗಳು ಅವರನ್ನು ಕೋಟ್ಯಆಧಿಪತಿಯನ್ನಾಗಿಸಿದೆ.

ಅವರು ಹಿಡಿದ ಅಪರೂಪದ ಮೀನು ಅವರಿಗೆ ಲಕ್ಷ್ಮೀ ಕಟಾಕ್ಷವನ್ನು ತಂದು ಕೊಟ್ಟಿದೆ.

ಆಗಸ್ಟ್ 15 ರಂದು, ಸ್ವಾತಂತ್ರೋತ್ಸವದ ಸಂಭ್ರಮದಲ್ಲಿ ತಾರೆ ತನ್ನ 10 ಸಿಬ್ಬಂದಿಯೊಂದಿಗೆ ಅರೇಬಿಯನ್ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದರು.

ADVERTISEMENT

ಮಹಾರಾಷ್ಟ್ರ-ಗುಜರಾತ್ ಕರಾವಳಿಯ ವಾಧ್ವಾನ್‌ನಿಂದ ಸುಮಾರು 20 ರಿಂದ 25 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ, ತಾರೆ ಮತ್ತು ಅವರ ತಂಡವು 157 ಘೋಲ್ ಮೀನುಗಳನ್ನು ಹಿಡಿದಿತ್ತು. 'ಸೀ ಗೋಲ್ಡ್' ಎಂದು ಕರೆಯಲಾಗುವ ಈ ಮೀನುಗಳಿಗೆ ಸಾಕಷ್ಟು ಬೇಡಿಕೆ ಇದೆ.

ಮೀನುಗಳನ್ನು ಹಿಡಿದ ಬಳಿಕ ಅವರು ಸಮುದ್ರದಿಂದ ಹೊರಬರುವ ಮುನ್ನವೇ ಈ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತ್ತು. ಆಗಸ್ಟ್ 28 ರಂದು, ಅವರು ಮುರ್ಬೆಗೆ ಮರಳಿದಾಗ ವ್ಯಾಪಾರಿಗಳು ಸಾಲುಗಟ್ಟಿ ನಿಂತಿದ್ದರು.

ತಾವು ಹಿಡಿದಿದ್ದ ಅಪರೂಪದ ಘೋಲ್ ಫಿಶ್‌ಗಳನ್ನು ಹರಾಜು ಮಾಡಿದಾಗ ಸುಮಾರು ₹ 1.33 ಕೋಟಿಗೆ ಬಿಡ್ ಆಗಿವೆ.

ಘೋಲ್ ಮೀನು ಅಥವಾ ಪ್ರೋಟೋನಿಬಿಯಾ ಡಯಾಕಾಂತಸ್ ಅನ್ನು ಸಾಮಾನ್ಯವಾಗಿ ಕಪ್ಪು ಚುಕ್ಕೆಗಳ ಕ್ರೋಕರ್ ಎಂದು ಕರೆಯಲಾಗುತ್ತದೆ. ಆಸ್ಟ್ರೇಲಿಯಾದಲ್ಲಿ ಕಪ್ಪು ಜ್ಯೂಫಿಶ್ ಎಂದು ಕರೆಯಲಾಗುತ್ತದೆ. ಇದು ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ಸೇರಿದ ಮೀನಿನ ಜಾತಿಯಾಗಿದೆ.

ಈ ಮೀನು ಅತ್ಯಂತ ದುಬಾರಿ ಸಮುದ್ರ ಮೀನುಗಳಲ್ಲಿ ಒಂದಾಗಿದೆ. ಔಷಧೀಯ ಗುಣಗಳನ್ನು ಹೊಂದಿರುವ ಇದರ ಹೃದಯವನ್ನು 'ಸೀ ಗೋಲ್ಡ್' ಎಂದು ಕರೆಯಲಾಗುತ್ತದೆ. ಇದು ವಿವಿಧ ಔಷಧಿಗಳನ್ನು ತಯಾರಿಸುವ ಪ್ರಮುಖ ಅಂಶವಾಗಿದೆ.

ಈ ಮೀನನ್ನು ಅತ್ಯಂತ ಸವಿಯಾದ ಪದಾರ್ಥವೆಂದು ಪರಿಗಣಿಸಲಾಗುತ್ತದೆ. ಪೂರ್ವ-ಏಷ್ಯಾದಲ್ಲಿ ಅದರ ಆಂತರಿಕ ಅಂಗಗಳ ಔಷಧೀಯ ಗುಣಗಳಿಗಾಗಿ ಹೆಚ್ಚು ಜನಪ್ರಿಯವಾಗಿದೆ.

ಇದರ ರೆಕ್ಕೆಗಳು ಸಹ ಔಷಧೀಯ ಮೌಲ್ಯವನ್ನು ಹೊಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.