ನವದೆಹಲಿ: ದೇಶದಲ್ಲಿ ಲಸಿಕಾ ಅಭಿಯಾನವನ್ನು ಚುರುಕುಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರವೂ ಲಸಿಕೆ ದಾಸ್ತಾನಿಗೆ ಆದ್ಯತೆ ನೀಡಿದೆ.
ಜುಲೈ ಅಂತ್ಯದ ವೇಳೆಗೆ 20-25 ಕೋಟಿ ಡೋಸ್ ಲಸಿಕೆ, ಆಗಸ್ಟ್-ಸೆಪ್ಟೆಂಬರ್ ಹೊತ್ತಿಗೆ 30 ಕೋಟಿ ಲಸಿಕೆಯನ್ನು ದಾಸ್ತಾನು ಮಾಡಲು ಕೇಂದ್ರ ನಿರ್ಧರಿಸಿದೆ.
ಈ ಮಧ್ಯೆ, ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಜೂನ್ ಹೊತ್ತಿಗೆ 10-12 ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆ ನೀಡುವುದಾಗಿ ಸರ್ಕಾರಕ್ಕೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.