ADVERTISEMENT

ರಾಜಸ್ಥಾನ ಬಿಕ್ಕಟ್ಟು | ವಿಧಾನಸಭೆ ಅಧಿವೇಶಕ್ಕೆ ಮನವಿ: ಪರಿಷ್ಕೃತ ಪ್ರಸ್ತಾವನೆ

ರಾಜ್ಯಪಾಲ ಮಿಶ್ರಾಗೆ ಸಲ್ಲಿಕೆ

ಪಿಟಿಐ
Published 26 ಜುಲೈ 2020, 10:09 IST
Last Updated 26 ಜುಲೈ 2020, 10:09 IST
ಅಶೋಕ್ ಗೆಹ್ಲೋಟ್ 
ಅಶೋಕ್ ಗೆಹ್ಲೋಟ್    

ಜೈಪುರ:ಮುಖ್ಯಮಂತ್ರಿ ಅಶೋಕ ಗೆಹ್ಲೋಟ್‌ ನೇತೃತ್ವ ಸರ್ಕಾರದಲ್ಲಿ ವಿಶ್ವಾಸ ಮತ ಸಾಬೀತು ಪಡಿಸಲು ಜುಲೈ 31ರಂದು ವಿಧಾನಸಭೆ ಅಧಿವೇಶನ ಕರೆಯುವಂತೆ ಕೋರುವ ಪರಿಷ್ಕೃತ ಪ್ರಸ್ತಾವನೆಯನ್ನು ರಾಜಸ್ಥಾನ ಸಚಿವ ಸಂಪುಟ ರಾಜ್ಯಪಾಲ ಕಲ್‌ರಾಜ್‌ ಮಿಶ್ರಾ ಅವರಿಗೆ ಶನಿವಾರ ತಡರಾತ್ರಿ ಸಲ್ಲಿಸಿದೆ.

ಈ ಮೊದಲು ಸಲ್ಲಿಸಿದ್ದ ಪ್ರಸ್ತಾವನೆಯನ್ನು ರಾಜ್ಯಪಾಲ ಮಿಶ್ರಾ ತಿರಸ್ಕರಿಸಿದ್ದರಲ್ಲದೇ, ಆರು ಸ್ಪಷ್ಟೀಕರಣ ಕೇಳಿದ್ದರು.ಶನಿವಾರ ಸಚಿವ ಸಂಪುಟ ಸಭೆ ನಡೆಸಿದ್ದ ಮುಖ್ಯಮಂತ್ರಿ ಗೆಹ್ಲೋಟ್‌ ಅವರು, ಪರಿಷ್ಕೃತ ಪ್ರಸ್ತಾವನೆ ಸಲ್ಲಿಸುವ ನಿರ್ಧಾರ ಕೈಗೊಂಡರು.

ಮುಖ್ಯಮಂತ್ರಿ ಗೆಹ್ಲೋಟ್‌ ವಿರುದ್ಧ ಬಂಡಾಯದ ಕಳೆ ಊದಿದ ಸಚಿನ್‌ ಪೈಲಟ್‌ ಅವರನ್ನು ಉಪಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಯಿತು. ಪೈಲಟ್‌ ಸೇರಿದಂತೆ 19 ಶಾಸಕರನ್ನು ಅನರ್ಹಗೊಳಿಸುವುದಾಗಿ ಸ್ಪೀಕರ್‌ ನೋಟಿಸ್‌ ಜಾರಿ ಮಾಡಿದ ನಂತರ ರಾಜಕೀಯ ಬಿಕ್ಕಟ್ಟು ಮತ್ತಷ್ಟೂ ಉಲ್ಬಣಗೊಂಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.