ಸಂಸತ್ ಭವನ
ನವದೆಹಲಿ: ಸಾಂಸ್ಥಿಕ ಮಧ್ಯಸ್ಥಿಕೆ ಪ್ರಕ್ರಿಯೆಗೆ ಉತ್ತೇಜನ ನೀಡುವ ಹಾಗೂ ಇಂತಹ ಪ್ರಕರಣಗಳಲ್ಲಿ ಕೋರ್ಟ್‌ನ ಮಧ್ಯಸ್ಥಿಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಕರಡು ಮಸೂದೆಯೊಂದನ್ನು ರೂಪಿಸಿದ್ದು, ಇದರ ಬಗ್ಗೆ ಅಭಿಪ್ರಾಯಗಳನ್ನು ಆಹ್ವಾನಿಸಿದೆ.
‘ಮಧ್ಯಸ್ಥಿಕೆ ಮತ್ತು ಸಂಧಾನ (ತಿದ್ದುಪಡಿ) ಮಸೂದೆ–2024’ರ ಕರಡಿನ ಬಗ್ಗೆ ಕೇಂದ್ರ ಕಾನೂನು ಸಚಿವಾಲಯದ ಅಧೀನದಲ್ಲಿ ಕೆಲಸ ಮಾಡುವ ಕಾನೂನು ವ್ಯವಹಾರಗಳ ಇಲಾಖೆಯು ಪ್ರತಿಕ್ರಿಯೆ ಆಹ್ವಾನಿಸಿದೆ.
ಮಾಜಿ ಕಾನೂನು ಕಾರ್ಯದರ್ಶಿ ಟಿ.ಕೆ. ವಿಶ್ವನಾಥನ್ ನೇತೃತ್ವದ ತಜ್ಞರ ಸಮಿತಿಯು ಮಧ್ಯಸ್ಥಿಕೆ ಕ್ಷೇತ್ರದಲ್ಲಿ ಆಗಬೇಕಿರುವ ಸುಧಾರಣೆಗಳ ಬಗ್ಗೆ ಕಾನೂನು ಸಚಿವಾಲಯಕ್ಕೆ ಶಿಫಾರಸು ಸಲ್ಲಿಸಿದ ನಂತರದಲ್ಲಿ ಈ ಮಸೂದೆ ಸಿದ್ಧವಾಗಿದೆ. ‘ತುರ್ತು ಮಧ್ಯಸ್ಥಿಕೆ’ ಎಂಬ ಪರಿಕಲ್ಪನೆಯನ್ನು ಕರಡು ಮಸೂದೆಯು ಒಳಗೊಂಡಿದೆ.
ಮಧ್ಯಸ್ಥಿಕೆ ಸಂಸ್ಥೆಗಳು, ಪೂರ್ಣ ಪ್ರಮಾಣದ ನ್ಯಾಯಮಂಡಳಿ ರಚಿಸುವ ಮೊದಲು ಮಧ್ಯಂತರ ಆದೇಶ ನೀಡಲು ‘ತುರ್ತು ಮಧ್ಯಸ್ಥಿಕೆದಾರ’ರನ್ನು ನೇಮಕ ಮಾಡಲು ಅವಕಾಶ ಇರುತ್ತದೆ ಎಂದು ಮಸೂದೆಯು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.