ADVERTISEMENT

ಸಹಕಾರ ಕ್ಷೇತ್ರ ಬಲಪಡಿಸಲು ಆದ್ಯತೆ: ಅಮಿತ್‌ ಶಾ

ಪಿಟಿಐ
Published 10 ಜುಲೈ 2021, 11:56 IST
Last Updated 10 ಜುಲೈ 2021, 11:56 IST
ಅಮಿತ್‌ ಶಾ
ಅಮಿತ್‌ ಶಾ   

ನವದೆಹಲಿ: ‘ಸಹಕಾರ ಕ್ಷೇತ್ರ ಮತ್ತು ಎಲ್ಲ ಸಹಕಾರ ಸಂಸ್ಥೆಗಳನ್ನು ಇನ್ನಷ್ಟು ಬಲಪಡಿಸಲು ಸರ್ಕಾರ ಉದ್ದೇಶಿಸಿದೆ. ಈ ಕುರಿತು ಚರ್ಚಿಸಲು ದೇಶದ ಪ್ರಮುಖ ಸಹಕಾರಿಗಳ ಜೊತೆಗೆ ಸಭೆ ನಡೆಸಲಾಗಿದೆ’ ಎಂAಅಅದು ಕೇಂದ್ರ ಸಹಕಾರ ಸಚಿವ ಅಮಿತ್‌ ಶಾ ಶನಿವಾರ ಇಲ್ಲಿ ಹೇಳಿದರು.

ಮೂರು ದಿನಗಳ ಹಿಂದೆ ಕೇಂದ್ರ ಸಂಪುಟ ಪುನಾರಚನೆ ಮತ್ತು ಖಾತೆಗಳ ಮರುಹಂಚಿಕೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸಹಕಾರ ಖಾತೆಯನ್ನು ಹೆಚ್ಚುವರಿಯಾಗಿ ಶಾ ಅವರಿಗೆ ವಹಿಸಿದ್ದರು.

ರಾಷ್ಟ್ರೀಯ ಸಹಕಾರ ಒಕ್ಕೂಟದ ಅಧ್ಯಕ್ಷ ದಿಲೀಪ್‌ ಸಂಘಾನಿ, ಭಾರತೀಯ ಕೃಷಿಕರ ರಸಗೊಬ್ಬರ ಸಹಕಾರ ಸಂಸ್ಥೆಯ (ಇಫ್ಕೊ) ಅಧ್ಯಕ್ಷ ಬಿ.ಎಸ್.ನಕಾಯ್, ವ್ಯವಸ್ಥಾಪಕ ನಿರ್ದೇಶಕ ಯು.ಎಸ್.ಅವಸ್ತಿ, ನಾಫೆಡ್‌ ಅಧ್ಯಕ್ಷ ಬಿಜೇಂದರ್‌ ಸಿಂಗ್‌ ಅವರು ಸಭೆಯಲ್ಲಿದ್ದರು.

ADVERTISEMENT

‘ಮೋದಿ ಅವರ ನೇತೃತ್ವದಲ್ಲಿ ನಾವು ದೇಶದ ಸಹಕಾರ ವ್ಯವಸ್ಥೆ ಮತ್ತು ಸಹಕಾರ ಸಂಘಗಳನ್ನು ಬಲಪಡಿಸಲು ಒತ್ತು ನೀಡಲಿದ್ದೇವೆ’ ಎಂದು ಅಮಿತ್‌ ಶಾ ಅವರು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.