ADVERTISEMENT

ಐತಿಹಾಸಿಕ ಸ್ಮಾರಕಗಳ ಪ್ರವೇಶ ಅವಧಿ ವಿಸ್ತರಣೆ?

ಸಂಸ್ಕೃತಿ ಸಚಿವಾಲಯದಿಂದ ಪ್ರಸ್ತಾವನೆ

ಪಿಟಿಐ
Published 25 ನವೆಂಬರ್ 2018, 20:03 IST
Last Updated 25 ನವೆಂಬರ್ 2018, 20:03 IST

ನವದೆಹಲಿ: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಅಡಿಯಲ್ಲಿ ಬರುವ, ಐತಿಹಾಸಿಕ ಮಹತ್ವದ ಸುಮಾರು 4 ಸಾವಿರ ಸ್ಥಳಗಳನ್ನು ಸಂಜೆಯ ನಂತರವೂ ಸಾರ್ವಜನಿಕರಿಗೆ ಮುಕ್ತವಾಗಿಸುವ ನಿಟ್ಟಿನಲ್ಲಿ ಸಂಸ್ಕೃತಿ ಸಚಿವಾಲಯ ನೀಲಿನಕ್ಷೆಯೊಂದನ್ನು ಸಿದ್ಧಪಡಿಸಿದೆ.

ಒಂದು ವೇಳೆ ಇದು ಅಂಗೀಕಾರವಾದಲ್ಲಿ ರಾತ್ರಿ 9ರವರೆಗೂ ಸಾರ್ವಜನಿಕರ ಭೇಟಿಗೆ ಅವಕಾಶ ನೀಡಲಾಗುತ್ತದೆ. ಪ್ರಸ್ತುತ ಸೂರ್ಯಾಸ್ತದ ನಂತರ ಈ ಸ್ಥಳಗಳಿಗೆ ಪ್ರವೇಶವಿರುವುದಿಲ್ಲ.

‘ಐತಿಹಾಸಿಕ ಪ್ರಾಮುಖ್ಯತೆ ಹೊಂದಿರುವ ಸ್ಥಳಗಳಿಗೆ ಪ್ರಾದೇಶಿಕ ಹಾಗೂ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಆದ್ದರಿಂದ ಪ್ರವೇಶ ಅವಧಿಯನ್ನು ವಿಸ್ತರಿಸುವುದು ಮಾತ್ರವಲ್ಲದೆ ಇವುಗಳ ಸುತ್ತಮುತ್ತ ಕಾರ್ಯಕ್ರಮಗಳನ್ನೂ ಆಯೋಜಿಸಬೇಕು. ಆಗ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಬಹುದು ಎಂದು ಪ್ರವಾಸೋದ್ಯಮ ಸಚಿವಾಲಯ ಸಹ ಪ್ರಸ್ತಾವನೆ ಇರಿಸಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.