ADVERTISEMENT

ಸಂಸತ್‌ನ ಮುಂಗಾರು ಅಧಿವೇಶನ: ಆರೋಗ್ಯಕರ ಚರ್ಚೆಗೆ ಸರ್ಕಾರ ಸಿದ್ಧ ಎಂದ ಮೋದಿ

ಪಿಟಿಐ
Published 18 ಜುಲೈ 2021, 10:23 IST
Last Updated 18 ಜುಲೈ 2021, 10:23 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ‘ಸಂಸತ್‌ನ ಮುಂಗಾರು ಅಧಿವೇಶನ ಸಂದರ್ಭದಲ್ಲಿ ವಿವಿಧ ವಿಷಯಗಳ ಕುರಿತು ಆರೋಗ್ಯಕರ ಹಾಗೂ ಅರ್ಥಪೂರ್ಣ ಚರ್ಚೆಗೆ ಸರ್ಕಾರ ಸಿದ್ಧವಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದರು.

ಸೋಮವಾರ (ಜುಲೈ 19) ಅಧಿವೇಶನ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸರ್ವಪಕ್ಷಗಳ ಸಭೆಯಲ್ಲಿ ಅವರು ಮಾತನಾಡಿದರು.

‘33 ಪಕ್ಷಗಳ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು. ಎಲ್ಲ ಜನಪ್ರತಿನಿಧಿಗಳು ನೀಡುವ, ವಿಶೇಷವಾಗಿ ವಿರೋಧ ಪಕ್ಷಗಳ ಸಂಸದರಿಂದ ಬರುವ ಸಲಹೆಗಳಿಗೆ ಹೆಚ್ಚಿನ ಮೌಲ್ಯ ಇರುತ್ತದೆ. ಅವರು ನೀಡುವ ಸಲಹೆ–ಸೂಚನೆಗಳು, ಪ್ರಸ್ತಾಪಿಸುವ ವಿಷಯಗಳಿಂದ ಚರ್ಚೆ ಹೆಚ್ಚು ಮೆರುಗು ಬರುತ್ತದೆ ಎಂಬುದಾಗಿ ಪ್ರಧಾನಿ ಹೇಳಿದರು’ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

ADVERTISEMENT

ರಕ್ಷಣಾ ಮಂತ್ರಿ ರಾಜನಾಥ್‌ಸಿಂಗ್‌, ರಾಜ್ಯಸಭೆಯ ಸದನನಾಯಕ ಪೀಯೂಷ್‌ ಗೋಯಲ್‌, ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್‌ರಂಜನ್‌ ಚೌಧರಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ಟಿಎಂಸಿ ಸಭಾನಾಯಕ ಡೆರೆಕ್‌ ಓಬ್ರಿಯಾನ್‌, ಡಿಎಂಕೆ ನಾಯಕ ತಿರುಚಿ ಶಿವ, ಸಮಾಜವಾದಿ ಪಾರ್ಟಿಯ ರಾಮಗೋಪಾಲ್‌ ಯಾದವ್‌, ಬಿಎಸ್‌ಪಿಯ ಸತೀಶ್‌ ಮಿಶ್ರಾ, ಎನ್‌ಡಿಎ ಅಂಗಪಕ್ಷವಾದ ಅಪ್ನಾ ದಳದ ನಾಯಕಿ ಅನುಪ್ರಿಯಾ ಪಟೇಲ್‌, ಎಲ್‌ಜಿಪಿ ಮುಖಂಡ ಪಶುಪತಿ ಪರಸ್‌ ಸಹ ಉಪಸ್ಥಿತರಿದ್ದರು.

ಮುಂಗಾರು ಅಧಿವೇಶನ ಆಗಸ್ಟ್‌ 13ರಂದು ಮುಕ್ತಾಯಗೊಳ್ಳುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.