ADVERTISEMENT

ಲೈಂಗಿಕ ಕಿರುಕುಳಕ್ಕೆ ಕಡಿವಾಣ: ಜಿಒಎಂ ಪುನರ್‌ರಚನೆ

ಪಿಟಿಐ
Published 24 ಜುಲೈ 2019, 19:43 IST
Last Updated 24 ಜುಲೈ 2019, 19:43 IST

ನವದೆಹಲಿ : ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ತಡೆಯುವುದು ಮತ್ತು ಕಾನೂನು ಚೌಕಟ್ಟುಗಳನ್ನು ಬಲಪಡಿಸುವ ಉಸ್ತುವಾರಿ ಹೊಂದಿರುವ ಉನ್ನತ ಸಚಿವರ ತಂಡವನ್ನು (ಜಿಒಎಂ) ಕೇಂದ್ರ ಸರ್ಕಾರ ಪುನರ್‌ರಚಿಸಿದೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಧ್ಯಕ್ಷತೆಯ ಸಮಿತಿಯಲ್ಲಿಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಸ್ಮೃತಿ ಇರಾನಿ ಇದ್ದಾರೆ.

ಕೆಲಸದ ಸ್ಥಳಗಳಲ್ಲಿ ನಡೆಯುವ ಲೈಂಗಿಕ ಕಿರುಕುಳಕ್ಕೆ ಕಡಿವಾಣ ಹಾಕಲು, ಕಾನೂನು ಮತ್ತು ಸಾಂಸ್ಥಿಕ ಚೌಕಟ್ಟುಗಳನ್ನು ಬಲಪಡಿಸಲು ಅಕ್ಟೋಬರ್‌ 2018ರಂದು ಉನ್ನತ ಸಚಿವರ ತಂಡವನ್ನು ರಚಿಸಲಾಗಿತ್ತು. ಈ ಸಮಿತಿ ಸಮಸ್ಯೆಯನ್ನು ಪರಿಶೀಲಿಸುವ ಜೊತೆಗೆ ಶಿಫಾರಸುಗಳನ್ನು ನೀಡಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.