ADVERTISEMENT

ಪ್ರಚಾರಕ್ಕಾಗಿ 3 ವರ್ಷಗಳಲ್ಲಿ ₹ 1,196 ಕೋಟಿ ಖರ್ಚು

ರಾಜ್ಯಸಭೆಗೆ ಪ್ರಕಾಶ್ ಜಾವಡೇಕರ್ ಮಾಹಿತಿ

ಪಿಟಿಐ
Published 14 ಸೆಪ್ಟೆಂಬರ್ 2020, 18:31 IST
Last Updated 14 ಸೆಪ್ಟೆಂಬರ್ 2020, 18:31 IST

ನವದೆಹಲಿ: ಕೇಂದ್ರ ಸರ್ಕಾರವು ತನ್ನ ಯೋಜನೆ ಮತ್ತು ಕಾರ್ಯಕ್ರಮಗಳ ಕುರಿತು ಮಾಧ್ಯಮದಲ್ಲಿ ಪ್ರಚಾರ ಮಾಡಲು ಮೂರು ವರ್ಷದ ಅವಧಿಯಲ್ಲಿ ಒಟ್ಟು ₹1,196 ಕೋಟಿ ಖರ್ಚು ಮಾಡಿದೆ.

ಮುದ್ರಣ, ಟಿವಿ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಚಾರಕ್ಕೆ ಈ ಹಣ ಖರ್ಚು ಮಾಡಲಾಗಿದೆ ಎಂದು ರಾಜ್ಯಸಭೆಗೆ ಸೋಮವಾರ ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ ಜಾವಡೇಕರ್ ಅವರು ಲಿಖಿತ ರೂಪದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

2017-18ರಲ್ಲಿ ₹ 585.31 ಕೋಟಿ, 2018-19ರಲ್ಲಿ ₹ 451.01 ಕೋಟಿ ಮತ್ತು 2019-20ರಲ್ಲಿ ₹ 160.57 ಕೋಟಿ ಖರ್ಚಾಗಿದೆ (ಒಟ್ಟು ₹ 1,196.89 ಕೋಟಿ) ಎಂದೂ ಜಾವಡೇಕರ್ ವಿವರಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.