ADVERTISEMENT

ಗೂಢಚರ್ಯೆ ಸಾಫ್ಟ್‌ವೇರ್‌ ಬಳಸಿದ್ದನ್ನು ಕೇಂದ್ರ ಒಪ್ಪಿಕೊಂಡಿದೆ: ಚಿದಂಬರಂ

ಪಿಟಿಐ
Published 18 ಆಗಸ್ಟ್ 2021, 6:36 IST
Last Updated 18 ಆಗಸ್ಟ್ 2021, 6:36 IST
ಪಿ. ಚಿದಂಬರಂ
ಪಿ. ಚಿದಂಬರಂ   

ನವದೆಹಲಿ: ‘ಗೂಢಚರ್ಯೆ ಸಾಫ್ಟ್‌ವೇರ್‌ ಬಳಸಿರುವುದನ್ನು ಕೇಂದ್ರ ಸರ್ಕಾರವೇ ಒಪ್ಪಿಕೊಳ್ಳುತ್ತಿದೆ’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಪಿ. ಚಿದಂಬರಂ ಬುಧವಾರ ಹೇಳಿದ್ದಾರೆ.

‘ಸರ್ಕಾರಕ್ಕೆ ಗೊತ್ತಿರುವ ಮಾಹಿತಿಯನ್ನು ಪ್ರಮಾಣಪತ್ರದ ಮೂಲಕ ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಸಾಲಿಸಿಟರಲ್‌ ಜನರಲ್ ಅವರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ. ಹೀಗಾಗಿ, ಈ ಮೂಲಕವೇ ಗೂಢಚರ್ಯೆ ಸಾಫ್ಟ್‌ವೇರ್‌ ಬಳಸಿರುವುದನ್ನು ಒಪ್ಪಿಕೊಂಡಂತಾಗಿದೆ. ಬಳಕೆಯಾಗಿರುವುದು ಪೆಗಾಸಸ್‌ ಸಾಫ್ಟ್‌ವೇರ್ ಅಥವಾ ಬೇರೆಯದೇ ಎನ್ನುವುದನ್ನು ಸ್ಪಷ್ಟಪಡಿಸಬೇಕು ಮತ್ತು ಯಾವ ಉದ್ದೇಶಕ್ಕೆ ಎನ್ನುವುದನ್ನು ತಿಳಿಸಬೇಕು’ ಎಂದು ಹೇಳಿದ್ದಾರೆ.

’ಈ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಿದರೆ ಉಳಿದ ಪ್ರಶ್ನೆಗಳಿಗೆ ಸಹಜವಾಗಿಯೇ ಉತ್ತರಗಳು ದೊರೆಯಲಿವೆ’ ಎಂದು ಚಿದಂಬರಂ ಹೇಳಿದ್ದಾರೆ.

ADVERTISEMENT

ಪೆಗಾಸಸ್‌ನಂತಹ ಗೂಢಚರ್ಯೆ ಸಾಫ್ಟ್‌ವೇರ್ ಅನ್ನು ದೇಶವು ಬಳಸುತ್ತದೆಯೇ ಅಥವಾ ಇಲ್ಲವೋ ಎನ್ನುವುದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ್ದಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.